ಶಿರಹಟ್ಟಿ: 2024-25 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಬಂದಿರುವ ಅನುದಾನಿತ ಪ್ರೌಢ ಶಾಲೆಗಳ ಮೇಲಿನ ಕ್ರಮದ ಆದೇಶವನ್ನು ತತ್ಕ್ಷಣದಿಂದಲೇ ಹಿಂಪಪಡೆಯಬೇಕೆAದು ಶನಿವಾರ ಗದಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕದ ವತಿಯಿಂದ ಮನವಿ ಸಲ್ಲಿಸಿದರು.
ಈ ವೇಳೆ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ ಕೆ. ಲಮಾಣಿ ಮಾತನಾಡುತ್ತಾ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರವು ಬೇರೆ ಬೇರೆ ಆದೇಶಗಳನ್ನು ಹೊರಡಿಸಿರುವದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಚ್ಚುವ ಹಂತವನ್ನು ತಲುಪಿವೆ, ಹಿಂದಿನ ಇತಿಹಾಸವನ್ನು ಮೆಲುಕು ಹಾಕಿದಾಗ ಸರ್ಕಾರ ಮಾಡಲಾರದ ಶೈಕ್ಷಣಿಕ ಕ್ರಾಂತಿಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡಿವೆ ಮಾಡಿವೆ ಎಂದು ಹೇಳಿದರು.
2000 ನೇ ಇಸ್ವಿಯ ತನಕ ಹುದ್ದೆಗಳನ್ನು ತುಂಬಲು ನೀಡಿರುವ ಆದೇಶವನ್ನು ತಂತ್ರಾಶ ಹಾಗೂ ಒಳ ಮೀಸಲಾತಿ ಕಾರಣದಿಂದ ವಿಳಂಬವಾಗಿದೆ. ಕೂಡಲೇ ಸರಕಾರವು ಹುದ್ದೆಗಳನ್ನು ತುಂಬಿಕೊಳ್ಳಬೇಕು. ಹಲವಾರು ಉತ್ತಮ ಕಾರ್ಯಗಳನ್ನು ಮಾಡಿರುವ ಶಿಕ್ಷಣ ಸಂಸ್ಥೆಗಳು ಬಹಳಷ್ಟು ಕಷ್ಟ ಅನುಭವಿಸುತ್ತಿರುವುದು ತಮಗೆ ಗೊತ್ತಿರುವ ವಿಷಯ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಹಾಗೂ ಶಿಕ್ಷಕಿಯರಿಗೂ ಮತ್ತು ಸಿಬ್ಬಂದಿ ವರ್ಗಕ್ಕೂ ಸರಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ ಆರ್. ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ ಎಸ್. ಪಾಟೀಲ, ತಾಲೂಕ ಅಧ್ಯಕ್ಷ ಭೀಮಪ್ಪ ಯರಗುಪ್ಪಿ, ಪಿ ಕೆ. ನಿಂಗನೌಡ್ರ, ಎಲ್ ಎಚ್. ಅರಳಿಹಳ್ಳಿ, ಝಡ್ ಎಂ. ಖಾಜಿ, ಮಂಜುನಾಥ ತೆಗ್ಗಿನಮನಿ, ವಿ ಸಿ. ಗುಳೇದ ಹಾಗೂ ಅನೇಕ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಇದ್ದರು.
ಅನುದಾನಿತ ಶಾಲೆಗಳ ಮೇಲಿನ ಕ್ರಮವನ್ನು ಸರ್ಕಾರ ವಾಪಾಸ್ ಪಡೆಯಬೇಕು : ಎಂ ಕೆ. ಲಮಾಣಿ
