ಅಶೋಕ ಸಾಮ್ರಾಟ್ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಕಾರ್ಯಾಗಾರ

Samagraphrabha
1 Min Read

ಧಾರವಾಡ: ನಗರದ ಅಶೋಕ ಸಾಮ್ರಾಟ್ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ IAS,KAS,PSI ಮತ್ತು ಬ್ಯಾಂಕಿಂಗ್ ವಿಷಯಗಳಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದ ಅರ್ಥಶಾಸ್ತ್ರ ಉಪನ್ಯಾಸಕ ಮಾನಪ್ಪ ದಾಸರ ವಿದ್ಯಾರ್ಥಿಗಳಿಗೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾರ್ಗದರ್ಶನ ನೀಡಿದರು.

ಸಾಮಾನ್ಯ ಜ್ಞಾನ ಉಪನ್ಯಾಸ ಸಿದ್ರಾಮ್ ಪೂಜಾರಿ ಮಾತನಾಡಿ ಅಧಿಕಾರಿಯಾಗಬೇಕೆಂದರೆ ಯಾವ ರೀತಿಯ ತಯಾರಿ ಮಾಡಿಕೊಳ್ಳಬೇಕು ಅದರ ವ್ಯವಸ್ಥೆ ಮತ್ತು ಸಿದ್ಧತೆ ಹೇಗಿರಬೇಕೆಂದು ತಿಳಿಸಿದರು.

ಪ್ರಸ್ತುತ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಅಗತ್ಯ ಮತ್ತು ಅನಿವಾರ್ಯವಾಗಿದೆ ಇಂದಿನ ಪರೀಕ್ಷೆಗಳು ಅತ್ಯಂತ ಕಠಿಣತೆಯಿಂದ ಕೂಡಿದ್ದು ಅದಕ್ಕೆ ನೀವು ಈ ಹಂತದಲ್ಲಿಯೇ ತಯಾರಿ ನಡೆಸಬೇಕೆಂದು ಸಂಸ್ಥೆಯ ಪ್ರಾಚಾರ್ಯರಾದ ಪ್ರೊ.ಸಿದ್ದಾರ್ಥ್. ಶಿವಶರಣ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಉಪನ್ಯಾಸಕರಾದ ಪ್ರೊ.ಮಂಜುನಾಥ.ಎನ್,ಪ್ರೋ.ನಾಗರಾಜ್.ಎಲ್,ಪ್ರೋ.ಪ್ರವೀಣ.ಎನ್,ಪ್ರೋ.ಶಿವಕುಮಾರ್,ಪ್ರೋ.ರೋಹಿದಾಸ್.ಎಲ್,ಪ್ರೋ.ವಿಜಯಲಕ್ಷ್ಮಿ.ಎಚ್,ಪ್ರೋ.ಅಂಕಿತಾ.ಎಸ್,ಪ್ರೋ.ವಿಜಯಕುಮಾರಿ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ, ವಿದ್ಯಾರ್ಥಿ/ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

- Advertisement -
Ad image

Share this Article