ಗಜೇಂದ್ರಗಡ:
ನಗರ ಸಮೀಪದ ಬ್ರೈಟ್ ಬಿಗಿನಿಂಗ್ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶನಿವಾರ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಯೋಗಾಭ್ಯಾಸದಿಂದ ಮಾನವನಲ್ಲಿ ಚೈತನ್ಯ ಉತ್ಪಾದನೆ ಆಗುತ್ತದೆ. ಯೋಗದಿಂದ ಮನುಷ್ಯ ತನ್ನ ದಿನನಿತ್ಯದ ಬದುಕಿನಲ್ಲಿ ಹೊಸ ಆಯಾಮ ಪಡೆದುಕೊಳ್ಳುತ್ತಾನೆ ಜೊತೆಗೆ ಉತ್ತಮ ಆರೋಗ್ಯಕ್ಕೆ ಸಂಬಂಧಿಸಿದ ರೋಗ ನಿರೋಧಕ ಶಕ್ತಿಯನ್ನು ಸಹ ಯೋಗದಿಂದ ಪಡೆಯಬಹುದು ಎಂದರು.
ಯೋಗಾಭ್ಯಾಸದ ತರಬೇತಿಯನ್ನು ನಗರದ ಟೀಮ್ ಪವರ ಸ್ಟಾರ ಡ್ಯಾನ್ಸ ಆಕಾಡೆಮೆಯ ಮುಸ್ತಾಕ ಹುಟಗೂರ ಹಾಗೂ ತಂಡದವರು ಮಕ್ಕಳಿಗೆ ಯೋಗಾಭ್ಯಾಸ ಮಾಡಿಸಿದರು.
ಬಳಿಕ ಸಂಸ್ಥೆಯ ಚೇರ್ಮನ್ ಸೀತಲ ಓಲೇಕಾರ ಮಾತನಾಡಿ
ಒಂದು ಭೂಮಿಗಾಗಿ ಯೋಗ, ಒಂದು ಆರೋಗ್ಯ” ಎಂಬುದು 2025 ರ ಅಂತರರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯವಾಗಿದೆ. ಅಂದರೆ ಯೋಗದಿಂದ ಇಡೀ ಜಗತ್ತನ್ನು ಆರೋಗ್ಯಕರವಾಗಿಸುವುದು ಇದರ ಉದ್ದೇಶ ಎಂದು ಅವರು ತಿಳಿಸಿದರು. ಈ ಧ್ಯೇಯವಾಕ್ಯವು ನಮ್ಮ ಸ್ವಂತ ಆರೋಗ್ಯ ಮತ್ತು ನಮ್ಮ ಗ್ರಹದ ಆರೋಗ್ಯದ ನಡುವಿನ ಆಳವಾದ ಸಂಬಂಧವನ್ನು ಒತ್ತಿಹೇಳುತ್ತದೆ ಎಂದರು.
ಇನ್ನೂ ಇದೆ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿಯರಾದ ಅನುಷಾ ತಳವಾರ, ಎಚ್.ಎಚ್.ಮಾದರ, ಕೆ.ಎಮ್.ಡೊಳ್ಳಿನ, ಪೃಥ್ವಿರಾಜ್ ಗೊಂಧಳೆ, ಗೀತಾ ಮುದಗಲ್, ಆಕಾಶ ತಾಳಿಕೋಟಿ ಸೇರಿದಂತೆ ಮುದ್ದು ವಿಧ್ಯಾರ್ಥಿಗಳು ಇದ್ದರು.

