ಯೋಗವು ಸದೃಡ ದೇಹ ಮನಸ್ಸಿಗೆ ದಿವ್ಯ ಔಷಧ

Samagraphrabha
1 Min Read

ಶಿರಹಟ್ಟಿ: ತಾಲೂಕಿನ ಅಲಗಿಲವಾಡ ಶಾಲೆಯಲ್ಲಿ ಹನ್ನೊಂದನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು ಸದೃಢ ದೇಹದಲ್ಲಿ ಸದೃಡ ಮನಸ್ಸಿರುತ್ತದೆ ಎಂಬಂತೆ ಇಂದಿನ ದಿನಮಾನದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುವದು ಅತಿ ಮುಖ್ಯವಾಗಿದೆ ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು 2014 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇದರ ಬಗ್ಗೆ ಪ್ರಸ್ತಾಪ ಮಂಡಿಸಿದರು
ಅದೆ ವರ್ಷ ಡಿಸೆಂಬರ ತಿಂಗಳಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಖಾಯಂ ಪ್ರತಿನಿಧಿಯಾಗಿರುವ ಅಶೋಕ ಮುಖರ್ಜಿ ರವರ ನೇತೃತ್ವದಲ್ಲಿ 11 ಡಿಸೆಂಬರ್ 2014 ರಂದು ಇದರ ಕರಡು ಪ್ರಸ್ಥಾವನೆ ಮಂಡನೆಯಾಯಿತು ವಿಶ್ವಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಈ ಪ್ರಸ್ಥಾವನೆಗೆ ಅನುಮೋದನೆ ನೀಡಿದವು ಜೂನ್ 21 ರಂದು ಉತ್ತರ ಗೋಲಾರ್ಧದಲ್ಲಿ ವರ್ಷದ ದೀರ್ಘ ದಿನವಾಗಿರುವ ಹಿನ್ನೇಲೆಯಲ್ಲಿ ಅಂದು ಆಚರಿಸಲು ತಿರ್ಮಾನ ಕೈಗೊಳ್ಳಲಾಯಿತು .

2015 ಜೂನ್ 21 ರಂದು ಚೊಚ್ಚಲ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು .
ಇದರ ಸ್ಮರಣಾರ್ಥವಾಗಿ ಹತ್ತು ರೂಪಾಯಿ ನಾಣ್ಯವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆಗೊಳಿಸಿತು
ಯೋಗವು ಸಂಸ್ಕೃತ ಭಾಷೆಯ ಯುಜ್ ಎಂಬ ಪದದಿಂದ ಬಂದಿದೆ ಇದರ ಅರ್ಥ ಒಗ್ಗೂಡಿಸುವದಾಗಿದ್ದು ದೈಹಿಕ ಮಾನಸಿಕ ವ್ಯಾಯಾಮದೊಂದಿಗೆ ದೇಹ , ಮನಸ್ಸು , ಆತ್ಮವನ್ನು ಒಗ್ಗೂಡಿಸುವದಾಗಿದೆ
ವ್ಯವಸ್ಥಿತ ಯೋಗವನ್ನು ಮಹರ್ಷಿ ಪತಂಜಲಿ ಮತ್ತು ಘೇರಾಡ ಮುನಿಯ ಕೊಡುಗೆ ಎಂದು ಪರಿಗಣಿಸಲಾಗಿದೆ
ಯೋಗವು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸುವದಲ್ಲದೆ ಜೀವಿತಾವಧಿ ವೃದ್ಧಿಸುತ್ತದೆ
ಮಕ್ಕಳಿಗೆ ಪ್ರಧಾನ ಗುರುಗಳಾದ ಹಾಲೇಶ ಎಸ್ ಜಕ್ಕಲಿ ಶಿಕ್ಷಕರಾದ ನೇಮೇಶ ಯರಗುಪ್ಪಿ ಯವರು ಸೂರ್ಯನಮಸ್ಕಾರ , ಪದ್ಮಾಸನ , ವೃಕ್ಷಾಸನ , ಶವಾಸನ , ತಾಡಾಸನ ಒಳಗೊಂಡಂತೆ ಹಲವಾರು ಯೋಗಾಸನಗಳನ್ನು ಮಾಡಿಸಿ ಅವುಗಳ ಉಪಯುಕ್ತತೆ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಿದರು
ಈ ಕಾರ್ಯಕ್ರಮದಲ್ಲಿ ಪ್ರಧಾನಗುರುಗಳಾದ ಹಾಲೇಶ ಎಸ್ ಜಕ್ಕಲಿ , ಶಿಕ್ಷಕರಾದ ನೇಮೇಶ ಯರಗುಪ್ಪಿ ಶಿಕ್ಷಣಪ್ರೇಮಿಗಳಾದ ಮೈಲಪ್ಪ ಹರಿಜನ ಹಾಗೂ ಮಕ್ಕಳು ಗ್ರಾಮದ ಗುರು ಹಿರಿಯರು ಭಾಗವಹಿಸಿ ಯೋಗ ಅಭ್ಯಾಸ ಮಾಡುವದರ ಮೂಲಕ ಯಶಸ್ವಿಗೊಳಿಸಿದರು .

Share this Article