ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹಗಳ ತಯಾರಿಕೆ ಮತ್ತು ಮಾರಾಟಕ್ಕೆ ಯತ್ನಿಸಿರುವವರ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮನವಿ

Samagraphrabha
2 Min Read

ಧಾರವಾಡ : ಗಣೇಶ ಚತುರ್ಥಿಗೆ ಇನ್ನೇನು ದಿನಗಣನೆ ಆರಂಭವಾಗಿದ್ದು ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹಗಳ ತಯಾರಿಕೆ ಮತ್ತು ಮಾರಾಟಕ್ಕೆ ಜಿಲ್ಲೆಯಲ್ಲಿ ಯತ್ನಿಸುತ್ತಿದ್ದಾರೆ ಅವರ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಧಾರವಾಡ ಜಿಲ್ಲಾ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಕರ ಸಂಘದ ವತಿಯಿಂದ ಗುರುವಾರ
ಜಿಲ್ಲಾಧಿಕಾರಿಗಳಿಗೆ
ಮನವಿ ಸಲ್ಲಿಸಿದರು,

ಮನವಿಯಲ್ಲಿ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪೂಜಿಸುವುದೇ ಶ್ರೇಷ್ಠ ಎಂಬ ನಂಬಿಕೆಯಿದೆ. ಆದರೆ, ಕೆಲವರು ಕಡಿಮೆ ಸಮಯದಲ್ಲಿ ಹೆಚ್ಚಿನ ವಿಗ್ರಹಗಳನ್ನು ತಯಾರಿಸಬಹುದೆಂಬ ದುಲಾನೆಯಿಂದ ಪರಿಸರಕ್ಕೆ ಪಾನಿ ಉಂಟು ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ತಯಾರು ಮಾಡುತ್ತಿದ್ದಾರೆ. ಪ್ಲಾಸ್ಟರ್ ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಭಾವಿ, ಕೆರೆ, ನದಿ ಸೇರಿದಂತೆ ಇನ್ನಿತರೆ ಜಲ ಮೂಲಗಳಲ್ಲಿ ವಿಸರ್ಜನೆ. ಮಾಡಿದಲ್ಲಿ ಪರಿಸರ ಮಾಲಿನ್ಯವಾಗುತ್ತಿದೆ. ಪ್ಲಾಸ್ಟರ್ ಆಫ್ ಪ್ಯಾರಿಸಿ ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟ ಹಾಗೂ ಬಣ್ಣ ಲೇಪನ ಮಾಡುವುದು ಜಲಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ 1974 ಕಲಂ 33(ಎ) ಪ್ರಕಾರ ಕಾನೂನು ಬಾಹಿರವಾಗಿದೆ. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿಷೇಧಿಸಿ ಆದೇಶ ಹೊರಡಿಸಿದೆ. ಹೀಗಿದ್ದರೂ ಪಿಓಪಿ ಗಣೇಶ ವಿಗ್ರಹಗಳ ಮಾರಾಟ ಕಳೆದ ವರ್ಷ ಬೇಕಾ ಬಿಟ್ಟಿಯಾಗಿ ನಡೆದಿದೆ ಪಿಒಪಿ ವಿಗ್ರಹಗಳಿಂದ ಉಂದಾಗುವ ಜಲಮಾಲಿನ್ಯದ ಬಗ್ಗೆ ಸಾರ್ವಜನಿಕರಲ್ಲಿ ನಾವು ಸಾಕಷ್ಟು ಅರಿವು ಮೂಡಿಸುತ್ತಿದ್ದೇವೆ. ಹೀಗಿದ್ದರೂ ಕೆಲ ದಂಧೆಕೋರರು ಲಾಭಕ್ಕಾಗಿ ಪಿಓಪಿ ವಿಗ್ರಹ ತಯಾರಿಕೆ ಹಾಗೂ ಮಾರಾಟಮಾಡಲು ಮುಂದಾಗಿದ್ದಾರೆ.

ನೆರೆಯ ಮಹಾರಾಷ್ಟ್ರ ರಾಜ್ಯಗಳಿಂದ ಮತ್ತು ತಾವೇ ಖುದ್ದಾಗಿ ತಯಾರಿಸಿದ ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳನ್ನು ತಂದು ಮಾರಾಟಕ್ಕೆ ಮಾಡಿದ್ದಾರೆ. ಇದರಿಂದ ಪರಿಸರ ಸ್ನೇಹಿ ಗಣೇಶ ವಿಗ್ರಹಗಳ ತಯಾರಕರಿಗೆ ಆರ್ಥಿಕವಾಗಿ ತೊಂದರೆಯಾಗಿದೆ ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಕಳೆದ ವರ್ಷ ಕೂಡಿಟ್ಟ ವಿಗ್ರಹಗಳನ್ನು ಕೂಡಲೇ ಪರಿಶೀಲಿಸಿ ವಶಪಡಿಸಿಕೊಂಡು ತಪ್ಪಿತಸ್ಥರ ವಿರುದ್ಧ W.P.No. 927 to 831 of 2017 and 1322 of 2017 de 25 31-01-2017 ರಲ್ಲಿ ನೀಡಿರುವ ಆದೇಶದಲ್ಲಿ ಮಂಡಳಿ
ಹೊರಡಿಸಿರುವ ಅಧಿಸೂಚನೆಯನ್ನು ಕ್ರಮಬದ್ದಗೊಳಿಸಿದೆ ಹಾಗೂ ಅಂತಹ ಉಲ್ಲಂಘನೆ ಮಾಡುವವರಿಗೆ IPC 1850 ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿನ ಮೂರ್ತಿಗಳ ಮಾರಾಟಕ್ಕೆ ಯಾವುದೇ ಕಾರಣಕ್ಕು ಅವಕಾಶ ನೀಡಬಾರದು, ಮತ್ತು
ಈಗಾಗಲೇ ನಮ್ಮ ಸಂಘಟನೆಯಿಂದ ಇಲಾಖೆಗೆ, ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ನೆರೆಯ ಮಹಾರಾಷ್ಟ್ರದಿಂದ ಈಗಾಗಲೇ ಲಾರಿ ಹಾಗು ಇನ್ನಿತರ ವಾಹನಗಳಲ್ಲಿ ನೂರಾರು ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹಗಳು ರಾಜ್ಯಕ್ಕೆ ಬರುತ್ತಿವೆ. ತಡೆಗಟ್ಟಲು ಜಿಲ್ಲಾಡಳಿತ, ಪೋಲಿಸ್ ಸುಲಾಖೆ ಜೊತೆಗೆ ಪರಿಸರ ಇಲಾಖೆ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲು ಮುಂದಾಗಬೇಕಿದೆ. ಮುಂಬರುವ ಗಣೇಶ ಚತುರ್ಥಿ ಸಂದರ್ಭದಲ್ಲಿ ಪಿಓಪಿ ಗಣೇಶ ವಿಗ್ರಹ ಮಾರಾಟ ಮಾಡಲು ಅವಕಾಶ ನೀಡಬಾರದು, ಎಂದು ಮನವಿ
ಸಲ್ಲಿಸಿದ್ದಾರೆ,

ಸಂದರ್ಭದಲ್ಲಿ
ಮನವಿ ಸ್ವೀಕರಿಸಿ ಮಾತನಾಡಿದ ಮಾನ್ಯ ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು,
ಈ ಸಂದರ್ಭದಲ್ಲಿ
ಜಿಲ್ಲಾಧ್ಯಕ್ಷ ಪ್ರಕಾಶ ಬಡಿಗೇರ.
ಪ್ರಶಾಂತ ಪತ್ತಾರ, ಶ್ರೀಧರ ಚಿತ್ರಗಾರ.. ಗೋಪಾಲ ಚಿತ್ರಗಾರ..ಶಂಕರ ಕಸಬೇದ,
ರಮೇಶ ಪು. ಬಡಿಗೇರ ಶಿವಾನಂದ ರಾ. ಬಡಿಗೇರ ನರಸಿಂಹ ವಿ. ಹಲಸಗಿ
ಜಗದೀಶ ಬ. ಹಂಗರತಿ ಸೇರಿದಂತೆ ಸಂಘದ ಸದಸ್ಯರು ಜಿಲ್ಲೆಯ ಕಲಾವಿದರು ಉಪಸ್ಥಿತರಿದ್ದರು…

Share this Article