ರೋಣ:ಬಡವರಿಗೆ ಇಂತಹ ಶಿಬಿರಗಳ ಮೂಲಕ ರಕ್ಷಣೆ ಮಾಡುವಂತ ಕೆಲಸ ಮಾಡಬೇಕು.ಕಾರ್ಯಕರ್ತರು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರಾಮಾಣಿಕ ಕೆಲಸ ಮಾಡಲು ಮುಂದಾಗಬೇಕು ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಾರ್ಯಾಲಯ, ಆರ್.ಎಸ್.ಪಾಟೀಲ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹುಟ್ಟು ಹಬ್ಬದ ಅಂಗವಾಗಿ ಯುವ ಕಾಂಗ್ರೆಸ್ ಪಕ್ಷದ ವತಿಯಿಂದ ಉಚಿತ ನೇತ್ರ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ ಹಾಗೂ ಸರಕಾರಿ ಶಾಲೆಯ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಜರುಗಿತು.
ಪುರಸಭೆ ಸದಸ್ಯ ಮಿಥುನ ಪಾಟೀಲ ಮಾತನಾಡಿ ದೇಶದ ಸಮಗ್ರ ಅಭಿವೃದ್ಧಿ ಹಾಗೂ ಏಕತೆಗೆ ಮೊದಲ ಆದ್ಯತೆಗೆ ಕಾಂಗ್ರೆಸ್ ಪಕ್ಷ ಮುಂದಾಗಿದೆ.ರಾಹುಲ್ ಗಾಂಧಿಯವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷವು ಬಡವರಿಗೆ ಅನುಕೂಲವಾಗುವ ಕಾರ್ಯಗಳನ್ನು ಮಾಡುತ್ತಿದೆ.ಯುವಕರಿಗೆ ಸಾಕಷ್ಟು ಪ್ರೋತ್ಸಾಹ ನೀಡುವಂತ ಕೆಲಸ ಮಾಡುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಮಿಥುನ ಜಿ ಪಾಟೀಲ, ಅಕ್ಷಯ ಐ ಪಾಟೀಲ, ಮುತ್ತು ನವಲಗುಂದ ರೋಣ ವಿಧಾನಸಭಾ ಯೂತ್ ಕಾಂಗ್ರೆಸ್ ಅಧ್ಯಕ್ಷ .ಮಹೇಶ ಕಳಸಣವರ ವಿ ಆರ್ ಗುಡಿಸಾಗರ, ವಿ ಬಿ ಸೋಮನಕಟ್ಟಿಮಠ, ಎಚ್.ಎಸ್ ಸೊಂಪುರ,ಪರಶುರಾಮ ಅಳಗವಾಡಿ,
ಯುಸೂಫ್ ಇಟಗಿ,ಬಸವರಾಜ ನವಲಗುಂದ, ವಿ.ಬಿ.ಸೋಮನಕಟ್ಟಿಮಠ, ಸೋಮು ನಾಗರಾಜ,ಯಚ್ಚರಗೌಡ ಗೋವಿಂದಗೌಡ್ರ ಪಿ ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ , ಬಸವರಾಜ ಹೊಸಳ್ಳಿ,ಅಭಿಷೇಕ ನವಲಗುಂದ,ಗೀತಾ ಮಾಡಲಗೇರಿ ಪುರಸಭೆ ಅಧ್ಯಕ್ಷೆ ಬಸಮ್ಮ ಕೊಪ್ಪದ, ಹನುಮಂತ ದ್ವಾಸಲ್ ಬಸವರಾಜ ತಳವಾರ ಮೈಲಾರಪ್ಪ ಚಳ್ಳಮರದ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

