ಛಬ್ಬಿ ಸರ್ಕಾರಿ ಶಾಲೆಗೆ ಕಾರ್ಯನಿರ್ವಾಹಕ ಅಧಿಕಾರಿ ಭೇಟಿ

Samagraphrabha
1 Min Read

ಗದಗ : ಶಿರಹಟ್ಟಿ ತಾಲ್ಲೂಕಿನ ಛಬ್ಬಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಲೆಗಳಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಭೇಟಿ ನೀಡಿದರು. ಶಾಲೆಯೊಂದರಲ್ಲಿ ವಿದ್ಯಾರ್ಥಿಗಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದರು.

ಛಬ್ಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು ಶಾಲಾ ಮಕ್ಕಳ ಜೊತೆಗೆ ಊಟ ಮಾಡಿದರು. ಇದೇ ವೇಳೆ ಆಹಾರದ ಗುಣಮಟ್ಟ, . ಆಹಾರ ದಾನ್ಯಗಳ ಗುಣಮಟ್ಟ, ಬಿಸಿ ಊಟದ ಕೊಠಡಿ, ಆಹಾರ ಖಾತೆಗಳ ವಿವರ ಇತ್ಯಾದಿ ಪರಿಶೀಲನೆ ನಡೆಸಿದರು ನಂತರ ಮಕ್ಕಳೊಂದಿಗೆ ಕೆಲಕಾಲ ಕಳೆದರು. ಈ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶಾಲಾ ಶಿಕ್ಷಕರು ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.

Share this Article