ಗದಗ : ತಾಲೂಕು ಹಾತಲಗೇರಿ ಗ್ರಾಮದಲ್ಲಿ ಇತ್ತೀಚೆಗೆ ನೂತನವಾಗಿ ನಿರ್ಮಾಣವಾದ ಪಾಂಡುರಂಗ ರುಕ್ಮಿಯಿ ದೇವಸ್ಥಾನದ ಉದ್ಘಾಟನೆ ನಡೆಯಿತು ವಿಠ್ಠಲ ರುಕ್ಕಾಯಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆಯು ಹಾತಲಗೇರಿ ಗ್ರಾಮದಲ್ಲಿ ಬಹಳ ವಿಜೃಂಭಣೆ ಇಂದ ಜರುಗಿತು.
ಈ ಕಾರ್ಯಕ್ರಮದಲ್ಲಿ ಸದ್ಗುರು ಕೃಷ್ಣಾ ಮಹಾರಾಜ ಲಾಖೆ ಶಿವೂರಕರ ಮಹಾಸಂಸ್ಥಾನ ಪೀಠ, ಪಂಢರಪುರ ಹಾಗೂ ಸದ್ಗುರು ಶಂಕರಾನಂದ ಮಹಾಸ್ವಾಮಿಗಳು ಮುಕ್ಕದ್ದೇಶ್ವರ ಮಠ, ಗದಗ-ಬೆಟಗೇರಿ ಇವರುಗಳ ಅಮೃತ ಹಸ್ತದಿಂದ ನೆರವೇರಿತ್ತು.
ಈ ಕಾರ್ಯಕ್ರಮದಲ್ಲಿ ಹಾತಲಗೇರಿ ಗ್ರಾಮದ ಸಂತ ಮಂಡಳಿ ಭಕ್ತರು ಹಿರಿಯರು ಮತ್ತು ಸುತ್ತಮುತ್ತಲಿನ ವಿವಿಧ ಗ್ರಾಮದ ಸಾಧು ಸಂತರು ಸದ್ಭಕ್ತರು ಪಾಲ್ಗೊಂಡಿದ್ದರು.
