ನವಲಗುಂದ : ತಹಸೀಲ್ದಾರ್ ಕಚೇರಿಗೆ ಭೂ ಸುರಕ್ಷಾ ಯೋಜನೆಗಳು ಸಾರ್ವಜನಿಕರಿಗೆ ದಾಖಲೆಗಳನ್ನು ವಿತರಣೆ ಮಾಡಲು ನೂತನವಾಗಿ ನಿರ್ಮಿಸಲಾದ ದಾಖಲೆ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ
ಶಾಸಕ ಎನ ಎಚ ಕೋನರೆಡ್ಡಿ ನಿಗದಿತ ಅವಧಿ ಒಳಗೆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿದ್ದಕ್ಕೆ ತಹಶೀಲ್ದಾರ್ ಹಾಗೂ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು ಮೊದಲನೇ ಹಂತವಾಗಿ ನವಲಗುಂದ್ ತಾಲೂಕಿಗೆ ಸರ್ಕಾರದಿಂದ 12 ಲ್ಯಾಪ್ಟಾಪ್ ಗಳನ್ನ 12ಗ್ರಾಮ ಆಡಳಿತ ಅಧಿಕಾರಿಗಳಿಗೆ ವಿತರ ಮಾಡಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಎಂದು ಸೂಚನೆ ನೀಡಿದರು
ಈ ಸಂದರ್ಭದಲ್ಲಿ ತಹಶೀಲ್ದಾರ್ ಸುಧೀರ ಸಾಹುಕಾರ, ಪುರಸಭೆ ಅಧ್ಯಕ್ಷರಾದ ಶಿವಾನಂದ ತಡಸಿ, ಪುರಸಭೆ ಸದಸ್ಯರಾದ ಜೀವನ್ ಪವಾರ, ಉಪ ನೊಂದನಾದೀಕಾರಿಗಳು, ಆರ ಐ ಕುಮಾರ್ ಪಾಟೀಲ್, ಶಿರಸ್ತೆದಾರ ಗಣೇಶ ಚಳ್ಳಿಕೇರಿ, ಕೃಷ್ಣ ಆರೇರ್ ನಿರ್ವಾಹಕರು ಕವಿರಾಜ ಚಿಪ್ಪಾಡಿ ಹಾಗೂ ಎಲ್ಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು
