ಶಿರಹಟ್ಟಿ: ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿಯವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿ ಬಳಗದ ವತಿಯಿಂದ ಪಟ್ಟಣದ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿರುವ ಬಡ ರೋಗಿಗಳಿಗೆ ಹಾಲು- ಹಣ್ಣು ಹಾಗೂ ಬ್ರೇಡ್ ವಿತರಿಸುವ ಮೂಲಕ ಆಚರಿಸಿದರು.
ಈ ವೇಳೆ ಮುತ್ತುರಾಜ ಭಾವಿಮನಿ ಮಾತನಾಡುತ್ತಾ, ಶಾಕೀರ್ ಸನದಿಯವರಿಗೆ ರಾಜಕಾರಣದಲ್ಲಿ ಉನ್ನತ ಸ್ಥಾನ ದೊರೆಯುವದರ ಜೊತೆಗೆ ದೇವರು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹೇಳುತ್ತಾ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಚಾಂದಸಾಬ ಮುಳಗುಂದ, ರಂಗಪ್ಪ ಗುಡಿಮನಿ, ಮಹಾಂತೇಶ ದಶಮನಿ, ಹನಮಂತ ದೊಡ್ಡಮನಿ, ಪ್ರಕಾಶ ಬಡೆಣ್ಣವರ, ಮಂಜು ಗುಡಿಮನಿ, ಹನಮಂತ ಮರ್ಚಣ್ಣವರ, ಮಾಬುಸಾಬ ಢಾಲಾಯತ, ಬಸವರಾಜ ಗುಡಿಮನಿ, ಹನಮಂತ ಭಾವನೂರ ಹಾಗೂ ಅನೇಕರು ಇದ್ದರು.
ಶಾಕೀರ್ ಸನದಿ ಹುಟ್ಟು ಹಬ್ಬದ ಪ್ರಯುಕ್ತ ಹಾಲು-ಹಣ್ಣು ವಿತರಣೆ
