ಹುಬ್ಬಳ್ಳಿ. ಜು 15. ಕರ್ನಾಟಕ ಉರ್ದೂ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಈದ್ ಮಿಲನ್ ಮುಶಾಯರಾ (ಕವಿಗೋಷ್ಠಿಯು ಇಂದು ಹುಬ್ಬಳ್ಳಿ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಮೌಲಾನಾ ಮುಹಮ್ಮದ್ ಅಲಿ ಖಾಝಿ ಮಾತನಾಡಿ , ಕರ್ನಾಟಕ ಉರ್ದೂ ಅಕಾಡೆಮಿ. ಇವರ ನೇತೃತ್ವದಲ್ಲಿ ಈದ್ ಮಿಲನ್ ಹಬ್ಬದ ಆಚರಣೆಯ ಎನ್ನು ಕರ್ನಾಟಕ ಉರ್ದು ಅಕಾಡೆಮಿಯಿಂದ ಆಯೋಜಿಸಲಾಗಿದೆಯಂದು ಮಾಹಿತಿ ನೀಡಿದರು ಈ ಕಾರ್ಯಕ್ರಮಕ್ಕೆ ನಾಲ್ಕರಿಂದ ಐದು ಜಿಲ್ಲೆಗಳಿಂದ ಕವಿ ಗೋಷ್ಠಿ ಗೆ ಆಗಮಿಸಿದ್ದಾರೆ ಈ ಗೋಷ್ಠಿಯಲ್ಲಿ ಉರ್ದು ಭಾಷೆಗೆ ನಮ್ಮ ರಾಜ್ಯ ಸರ್ಕಾರ ಆದ್ಯತೆ ನೀಡಿದೆ ಮಾನ್ಯ ಮುಖ್ಯಮಂತ್ರಿಗಳಾದಶ್ರೀ ಸಿದ್ದರಾಮಯ್ಯನವರು ಹಾಗೂ ಶ್ರೀ ಜಮೀರ್ ಅಹ್ಮದ್ ರವರು ಉರ್ದು ಅಕಾಡೆಮಿಗೆ ಎರಡು ಕೋಟಿ ರೂ ಬಜೆಟ್ ಕೊಟ್ಟಿರುವ ಹಿನ್ನೆಲೆಯಲ್ಲಿ ಉರ್ದು ಪ್ರಚಾರ ಕ್ಕಾಗಿ 31 ಜಿಲ್ಲೆಯಲ್ಲಿ ಉರ್ದು ಭಾಷೆಯ ಬಗ್ಗೆ ಶಾಲೆಗಳಲ್ಲಿ ಅಂಗನವಾಡಿಗಳಲ್ಲಿ ಮತ್ತು ಇತರೆ ಸಂಘ-ಸಂಸ್ಥೆಗಳಲ್ಲಿ ಭಾಷಾ ಪ್ರಚಾರಕ್ಕಾಗಿ ನಾವು ಪ್ರಯತ್ನಿಸುತ್ತೇವೆ , ಇದಕ್ಕೆ ಸರ್ಕಾರ ಸಹಾಯ ಹಸ್ತ ಮಾಡಿದ್ದಕ್ಕೆ ಹೃತ್ಪೂರ್ವಕ ಅಭಿನಂದನೆಗಳು ತಿಳಿಸುತ್ತೇವೆ ಎಂದು ಅಧ್ಯಕ್ಷರು ತಿಳಿಸಿದರು.
ಇದೇ ಸಂದರ್ಭದಲ್ಲಿ ಸೈಯದ್ ಅಜ್ಜಂಪಿರ್ ಖಾತ್ರಿ ರವರು ಮಾತನಾಡಿ ಈ ಈದ್ ಮಿಲಾದ್ ಅಥವಾ ಮಿಲಾದುನ್ನಬಿ ಇದು ಇಸ್ಲಾಂ ಧರ್ಮದ ಮಹತ್ವದ ಧಾರ್ಮಿಕ ಹಬ್ಬವಾಗಿದೆ ಈ ಹಬ್ಬವನ್ನು ಪ್ರವಾದಿ ಮಹಮ್ಮದ್ ನಬಿ ಅವರ ಜನ್ಮದಿನದ ಆಚರಿಸಲಾಗುತ್ತದೆ ಪ್ರತಿ ವರ್ಷ ಮುಸ್ಲಿಂ ಸಮುದಾಯಗಳು ವಿಶ್ವದ್ಯಂತ ಭಕ್ತಿ ಹಾಗೂ ಶ್ರದ್ಧೆಯಿಂದ ಆಚರಿಸುತ್ತಾರೆ ವಿಶೇಷವಾಗಿ ನಮಾಜ್ಧಾನ ಧರ್ಮ ಧಾರ್ಮಿಕ ಉಪನ್ಯಾಸಗಳು ಮತ್ತು ಗೋಷ್ಠಿಗಳು ನಡೆಸಲಾಗುತ್ತದೆ. ಅಲ್ಲದೆ ನಮ್ಮ ಸರ್ಕಾರವು ಉರ್ದು ಭಾಷೆಗೆ ಒತ್ತು ಕೊಟ್ಟು ಭಾಷೆ ಬಳಸಲು ಸಿಎಂ ಸಿದ್ದರಾಮಯ್ಯನವರು ಮತ್ತು ಜಮೀರ್ ಅಹ್ಮದವರು ಎರಡು ಕೋಟಿ ರೂ ಬಜೆಟ್ ಮಂಡಿಸಿದ್ದು ಸಂತಸ ವಿಷಯವಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮ ದಲ್ಲಿ ಅಜ್ಜಿಮ್ ಪೀರ್ ಖಾದ್ರಿ ಎ ಯಂ ಹಿಂಡಸಗೇರಿ ಅಲ್ತಾಫ್ ಹಳ್ಳೂರ್ ಡಾ ಬಿಜಾಪುರ್ ಆರಿಫ್ ಬಾಗಲಕೋಟ ಖಲೀಲ್ ಖಾಝಿ ಮತ್ತು ಕವಿಗಳು ಇತರರು ಇದ್ದರು
