ಲಕ್ಷ್ಮೇಶ್ವರ: ತಾಲ್ಲೂಕು ಶಿಗ್ಲಿ ಗ್ರಾಮದ ದೇವಾಂಗ ನೌಕರರ ಸಂಘದ ವತಿಯಿಂದ 2024-25 ನೇ ಸಾಲಿನ ಎಸ್.ಎಸ್.ಎಲ್. ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಇಂದು ಭಾನುವಾರ ಶಿಗ್ಲಿ ಗ್ರಾಮದ ಶಾಖಾಂಬರಿ ಸಮುದಾಯ ಭವನದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಶಿಗ್ಲಿ ಗ್ರಾಮದ ಪರಮೇಶಪ್ಪ ಬಳಿಗಾರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ತಮ್ಮನಗೌಡ್ರ ಪಾಟೀಲ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಿ ಆ ಮಕ್ಕಳಿಗೆ ತಮ್ಮ ಮುಂದಿನ ಭವಿಷ್ಯ ಉಜ್ವಲಗೊಳಿಸಿಕೊಳ್ಳಲು ವೇದಿಕೆ ನಿರ್ಮಿಸಿದ ಶಿಗ್ಲಿ ದೇವಾಂಗ ನೌಕರರ ಸಂಘದ ಕಾರ್ಯ ಶ್ಲಾಘನೀಯ ಎಂದು ತಮ್ಮ ನುಡಿಗಳಲ್ಲಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರೇಶ್ವರ ಹುಲಗೂರ ವಹಿಸಿಕೊಂಡು ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ಸುಭಾಸ ಹುಲಗೂರ ಅದ್ಯಕ್ಷರು ಮಕ್ಕಳಿಗೆ ಪ್ರೋತ್ಸಾಹ ನೀಡುವ ಇಂಥ ಕಾರ್ಯಕ್ರಮ ಉತ್ತಮ ಮತ್ತು ಮಕ್ಕಳ ಮುಂದಿನ ಭವಿಷ್ಯ ಉಜ್ವಲಗೊಳ್ಳಲಿ ಎಂದು ತಿಳಿಸಿದರು.
ನಾರಾಯಣ ಹತ್ತಲಗೇರಿ ಪ್ರಾಸ್ತಾವಿಕ ನುಡಿಗಳಲ್ಲಿ ಸಂಘದ ಕಾರ್ಯ ಚಟುವಟಿಕೆಗಳ ಕುರಿತು ಸವಿವರವಾದ ವರದಿ ಮಂಡಿಸಿದರು.
ಉಪಾಧ್ಯಕ್ಷ ಪ್ರಭಾಕರ ಕರ್ಜಗಿ, ಈರಪ್ಪ ಮೂಲಿಮನಿ, ನಾರಾಯಣಪ್ಪ ಹರವಿ, ಚಂದ್ರಶೇಖರ ಬಂಕಾಪುರ, ಹಾಲೇಶ ನೆಗಳೂರ, ನಾರಾಯಣ ಸೀ. ಹುಲಗೂರ, ನಾಗರಾಜ ಕರ್ಜಗಿ, ಅಮರೇಶ್ವರ ಚಾ.ಹುಲಗೂರ, ರವಿ ಹತ್ತಲಗೇರಿ, ವೆಂಕಟೇಶ ಕಳ್ಳಿ, ಮಾಂತೇಶ ನೆಗಳೂರ, ಮಾಂತೇಶ ಅಸುಂಡಿ, ಶಾರದಾ ತಪ್ಪಲದ, ರೇವತಿ ಬಿದರಳ್ಳಿ, ಶೋಭಾ ಯರಡೋಣಿ, ಶಿವಲೀಲಾ ಜನಿವಾರದ ಇದ್ದರು
ಈ ಸಂದರ್ಭದಲ್ಲಿ ದೇವಾಂಗ ಸಮಾಜದ ಹಿರಿಯರು ಮತ್ತು ಯುವಕರು ಹಾಗೂ ತಾಯಂದಿರು ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ನಾರಾಯಣ ಗಾಡದ ಸ್ವಾಗತಿಸಿದರು. ಶೋಭಾ ಕುದರಿ ಸನ್ಮಾನ ಕಾರ್ಯಕ್ರಮ ನಡೆಸಿದರು ನಾರಾಯಣ ಹುಲಗೂರ ನಿರೂಪಿಸಿದರು ಶಂಕರ ಶಿರಹಟ್ಟಿ ವಂದಿಸಿದರು.
