ಕೋಚಿಂಗ್ ಸೆಂಟರ್ ಗೆ ಮಕ್ಕಳು ಹಾಜರಾಗದಂತೆ ಕ್ರಮಕ್ಕೆ ಮನವಿ

Samagraphrabha
1 Min Read

ನವಲಗುಂದ: ಸರ್ಕಾರಿ/ ಅನುದಾನಿತ ಶಾಲೆಯ 4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳು ಶಾಲಾ ಅವಧಿಯಲ್ಲಿ ಖಾಸಗಿ ಕೋಚಿಂಗ್ ಸೆಂಟರ್‌ದಲ್ಲಿ ಹಾಜರಾಗದಂತೆ ಸೂಕ್ತ ರೀತ್ಯ ಕಾನೂನು ಕ್ರಮ ಜರುಗಿಸುವಂತೆ ಆರ್.ಟಿ.ಐ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮಾನೇಜರ್ ಹರೀಶ್ ಬೊಮ್ಮನಹಳ್ಳಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಬರುವಂತಹ ಸರ್ಕಾರಿ/ ಅನುದಾನಿತ ಪ್ರಾಥಮಿಕ ಶಾಲೆಯ 4 ಮತ್ತು 5 ನೇ ತರಗತಿಯ ಮಕ್ಕಳು ಶಾಲಾ ಅವಧಿಯಲ್ಲಿಯೇ ಮುರಾರ್ಜಿ, ನವೋದಯ, ಸೈನಿಕ ಶಾಲೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮುರಾರ್ಜಿ ಸ್ಕೂಲ್, ಕಿತ್ತೂರ ರಾಣಿ ಚನ್ನಮ್ಮ ಸೇರಿದಂತೆ ಇನ್ನಿತರೇ ಸ್ಪರ್ದಾತ್ಮಕ ಪರೀಕ್ಷೆಗಳ ತಯಾರಿಗಾಗಿ ಖಾಸಗಿ ಕೋಚಿಂಗ್ ಸೆಂಟರ್‌ಗಳಲ್ಲಿ ಹಾಜರಾಗುತ್ತಾರೆ, ಶಾಲಾ ಹಾಜರಾತಿ ಸರ್ಕಾರಿ ಶಾಲೆಗಳಲ್ಲಿ ಕೋಚಿಂಗ್ ಖಾಸಗಿ ಸೆಂಟರಗಳಲ್ಲಿ ಇದರ ಹಿಂದೆ ದೊಡ್ಡ ಮಾಫಿಯಾ ಇದ್ದು ಈ ಕುರಿತು ಕಾನೂನು ಕ್ರಮ ಜರುಗಿಸಬೇಕು ತಪ್ಪಿದ್ದಲ್ಲಿ ಸಂಬಂಧಪಟ್ಟ ದಾಖಲೆಗಳೋಂದಿಗೆ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಿ.ಆರ್.ಪಿ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗುವುದೆಂದು ಮನವಿಯಲ್ಲಿ ತಿಳಿಸಿದ್ದಾರೆ..

Share this Article