ಸರ್ಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Samagraphrabha
1 Min Read

ಲಕ್ಷ್ಮೇಶ್ವರ : ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಅಡ್ರಕಟ್ಟಿಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಪ್ರಧಾನ ಗು ಗುರುಮಾತೆ ಎಸ್ ಎಚ್ ಉಮಚಗಿ ಮಾತನಾಡಿ ಆರೋಗ್ಯದಿಂದ ಇರಬೇಕಾದರೆ ನಮ್ಮ ಮನೆ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿ ಇರಬೇಕು ಸ್ವಚ್ಛ ಪರಿಸರ ನಿರ್ಮಾಣಕ್ಕೆ ನಾಗರಿಕರು ಸಹಕರಿಸಬೇಕು ಎಂದರು. ಹೆಚ್ಚಿನ ಪ್ಲಾಸ್ಟಿಕ್ ಬಳಕೆಯಿಂದಾಗಿ ವಾತಾವರಣ ಕಲುಷಿತ ತವಾಗುತ್ತಿದ್ದು ಈ ಬಾರಿಯ ಪರಿಸರ ದಿನಾಚರಣೆಯ ಉದ್ದೇಶ ಪ್ಲಾಸ್ಟಿಕ್ ಮುಕ್ತ ಗ್ರಾಮಗಳನ್ನಾಗಿ ಮಾಡುವುದಾಗಿದೆ ಪ್ಲಾಸ್ಟಿಕ್ ನಲ್ಲಿ ಏಕ ಬಳಿಕೆಯ ಪ್ಲಾಸ್ಟಿಕ್ ಮತ್ತು ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಎಂಬ ಎರಡು ವಿಧವಿದ್ದು ಈಗಾಗಲೇ ಪ್ಲಾಸ್ಟಿಕ್ ನಿಷೇಧಿಸಲಾಗಿದೆ ಎಂದು ಹಾಗೂ ಒಣ ಕಸ ಮತ್ತು ಹಸಿ ಕಸ ವಿಂಗಡಿಸುವುದನ್ನು ಮಕ್ಕಳು ಈಗಲೇ ಅಭ್ಯಾಸ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ದೊಡ್ಡೂರ ಸಿಆರ್‌ಪಿ ಶಿವಾನಂದ ಅಸುಂಡಿ ಮಾತನಾಡಿ ಪರಿಸರ ರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಿರಬೇಕೆಂದರು ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಎಸ್ ಕೆ ಅಮ್ಮಿನಭಾವಿ ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಎಂ ಎಸ್ ಹಿರೇಮಠ ಶ್ರೀ ಪಿ ಸಿ ಕಾಳಶೆಟ್ಟಿ,ಎಂ ವೈ ನೀಲಾಯ್ಕರ್ ಶ್ರೀಮತಿ ಗುರುಮಠ, ಎಸ್ ಸಿ ಹಿರೇಮಠ, ಎಸ್ಎಂ ಕೌಜಗೇರಿ ಹಾಗೂ ಶ್ರೀ ಪಿ ವಿ ಹಾಲಗುಂಡಿ ಉಪಸ್ಥಿತರಿದ್ದರು.

Share this Article