24,70,530 ಮೌಲ್ಯದ 136 ಮೊಬೈಲಗಳುನ್ನು ಸಾರ್ವಜನಿಕರಿಗೆ ವಿತರಣೆ

Samagraphrabha
1 Min Read

ಗದಗ: ಕಳೆದುಹೋದ ಹಾಗೂ ಕಳ್ಳತನವಾದ ಮೊಬೈಲ್‌ಗಳನ್ನು ಪತ್ತೆಹಚ್ಚಲು ನೆರವಾಗುವಂತೆ ಕೇಂದ್ರ ಸರ್ಕಾರ 2023 ಫೆಬ್ರುವರಿಯಲ್ಲಿ ಜಾರಿಗೆ ತಂದಿರುವ ಸಿಇಐಆರ್‌ ಪೋರ್ಟಲ್‌, ಮೊಬಿಫೈ ಆ್ಯಪ್‌ ಮೂಲಕ ಗದಗ ಜಿಲ್ಲಾ ಪೊಲೀಸರು ಈ ವರೆಗೂ ಒಟ್ಟು 2 ಕೋಟಿಗೂ ಅಧಿಕ ಮೌಲ್ಯದ 1257 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ಅವುಗಳನ್ನು ಮಾಲೀಕರಿಗೆ ಹಿಂತಿರುಗಿಸಿದ್ದಾರೆ.

ನಗರದ ಎಸ್‌ಪಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌.ನೇಮಗೌಡ, ‘ಕಳೆದುಕೊಂಡ ಮೊಬೈಲ್‌ಗಳನ್ನು ಹೊಸ ತಂತ್ರಜ್ಞಾನದ ಮೂಲಕ ಶೀಘ್ರ ಪತ್ತೆ ಹಚ್ಚಲು ಸಿಇಐಆರ್‌ ಫೋರ್ಟಲ್‌ ಬಳಕೆ ಮಾಡಲಾಗುತ್ತಿದೆ. ಮೊಬಿಫೈ ಆ್ಯಪ್‌ ಮೂಲಕ 136 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ಅವುಗಳನ್ನು ವಾರಸುದಾರರಿಗೆ ಹಿಂತಿರುಗಿಸಿ ಈ ಕುರಿತು ಮಾಹಿತಿ ನೀಡಿದ್ದಾರೆ.

‘ಗದಗ ನಗರ ಠಾಣೆ ವ್ಯಾಪ್ತಿಯಲ್ಲಿ 7, ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ 11, ಬೆಟಗೇರಿ 4, ಬಡಾವಣೆ ಠಾಣೆ 10, ಲಕ್ಷ್ಮೇಶ್ವರ 9, ನರಗುಂದ 25, ರೋಣ 14, ಗಜೇಂದ್ರಗಡ 13 ಮುಂಡರಗಿ 21, ನರೇಗಲ್‌ 4, ಸಿ ಎನ್ ಇ 18,ಸ್ಟೇಷನ್‌ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ
ಒಟ್ಟು 136 ಮೊಬೈಲ್ 24,70,530 ಮೌಲ್ಯದ ಮೊಬೈಲ್‌ ಸೇರಿದಂತೆ ಒಟ್ಟು ಮೊಬೈಲ್‌ಗಳನ್ನು ಮಾಲೀಕರಿಗೆ ಹಿಂತಿರುಗಿಸಲಾಯಿತು.

ಮೊಬೈಲ್ ಪತ್ತೆಹಚ್ಚುವಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯವನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿರಿ ಶ್ಲಾಘಿಸಿ ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ ಪೋಲಿಸರ್ ಈ ಕಾರ್ಯಕ್ಕೆ ಸಾರ್ವಜನಿಕರು ಅಭಿನಂದಿಸಿದ್ದಾರೆ.

- Advertisement -
Ad image

#ಸಿಇಐಆರ್‌ ಪೋರ್ಟಲ್‌ #ಮೊಬಿಫೈ
#CEIR #Mobifi #gadagpolice #lostmobil #mobil #gadagnews #publice #samagarparbha #ಸಮಗ್ರ ಪ್ರಭ

Share this Article