ಗದಗ : ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಿಂದ ಇದೇ ಮೊದಲ ಬಾರಿಗೆ ನೀಡಲಾಗುತ್ತಿರುವ “ಡಿಜಿಪಿ ಪ್ರಶಂಸನಾ ಪದಕ”ಕ್ಕೆ ಗದಗ ಜಿಲ್ಲೆಯಿಂದ ಹಿರಿಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ಆಯ್ಕೆಯಾಗಿದ್ದಾರೆ.
ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಬಿ.ಎಸ್. ನೇಮಗೌಡ, ಮುಳಗುಂದ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ಶಿವಯೋಗಿ, ಮತ್ತು ಮುಂಡರಗಿ ಠಾಣೆಯ ಕಾನ್ಸಟೇಬಲ್ ಜಾಫರ್ ಬಚ್ಚೇರಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 200 ಮಂದಿ ಪೊಲೀಸರನ್ನು ಆಯ್ಕೆಮಾಡಲಾಗಿದ್ದು, ಗದಗ ಜಿಲ್ಲೆಯಿಂದ ಮೂವರು ಹೆಸರುಗಳು ಈ ಪೈಕಿ ಕಾಣಿಸಿಕೊಂಡಿವೆ. ತಮ್ಮ-ತಮ್ಮ ಕ್ಷೇತ್ರಗಳಲ್ಲಿ ಕರ್ತವ್ಯ ನಿಷ್ಠೆ, ಅಪರಾಧ ನಿರೋಧನೆ, ಸಾರ್ವಜನಿಕರೊಂದಿಗೆ ಸಮನ್ವಯ, ಶಿಸ್ತುಪಾಲನೆ ಹಾಗೂ ಸಮಾಜಮುಖಿ, ಶ್ರೇಷ್ಠತೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಮೇ 21ರಂದು ಬೆಂಗಳೂರಿನಲ್ಲಿ ನಡೆಯಲಿರುವ ಡಿಜಿಪಿ ಕಮಾಂಡೇಷನ್ ಡಿಸ್ಕ್ ಪರೇಡ್‌ನಲ್ಲಿ ನಡೆಯಲಿದೆ ಅಂದು ಪ್ರಶಸ್ತಿ ಪ್ರಧಾನ ನೀಡಲಾಗುವುದು.

