ರೋಣ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ಅನ್ನು ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಇರುವ ಲೋಕೋಪಯೋಗಿ ಇಲಾಖೆಯ ಜಾಗದಲ್ಲಿ ಜನಪ್ರಿಯ ಶಾಸಕರಾದ ಜಿ ಎಸ್ ಪಾಟೀಲ್ ಅವರು ಉದ್ಘಾಟನೆ ಮಾಡಿ ತಿಂಡಿ ಸವಿದರು.
ಮಿಥುನ ಜಿ ಪಾಟೀಲ ಮಾತನಾಡಿ ಇಂದಿರಾ ಕ್ಯಾಂಟೀನ್ ನಮ್ಮ ಕಾಂಗ್ರೇಸ್ ಸರಕಾರದ ಮಹತ್ವ ಕಾಂಕ್ಷೆಯ ಯೋಜನೆಯಾಗಿದ್ದು ಇದು ಕಡಿಮೆ ಬೆಲೆಯಲ್ಲಿ ಸಾರ್ವಜನಿಕರಿಗೆ ಹಸಿವು ನಿಗಿಸುತ್ತದೆ. ಬಡ ಜನರಿಗೆ ಅನುಕೂಲವಾಗಲೆಂದು ಸರಕಾರ ಇಂದಿರಾ ಕ್ಯಾಂಟೀನ್ ಜಾರಿಗೆ ತಂದಿದೆ ಬಡವರು ಇದರ ಅನುಕೂಲವನ್ನು ಪಡೆಯಬೇಕು ಎಂದು ಹೇಳಿದರು.
50 ಕೋಟಿ ರೂಗಳ ಜಿಟಿಟಿಸಿ ತಾಂತ್ರಿಕ ಮಹಾವಿದ್ಯಾಲಯ ಭೂಮಿ ಪೂಜೆ ನೆರವೇರಿಸಿ ಜನಪ್ರಿಯ ಶಾಸಕರಾದ ಜಿ ಎಸ್ ಪಾಟೀಲ ಮಾತನಾಡಿ ಸರ್ಕಾರದಿಂದ ನಮ್ಮ ಉತ್ತರ ಕರ್ನಾಟಕ ಭಾಗಕ್ಕೆ ನಮ್ಮ ನೆಚ್ಚಿನ ಮುಖ್ಯ ಮಂತ್ರಿಗಳು ಉತ್ತಮ ಶಿಕ್ಷಣ ದೊರಕಿಸಿ ಕೊಡಲು ಸುಮಾರು 50 ಕೋಟಿ ವೆಚ್ಚದಲ್ಲಿ ಜಿಟಿಟಿಸಿ ತಾಂತ್ರಿಕ ಮಹಾವಿದ್ಯಾಲಯ ಮಂಜೂರು ಮಾಡಿದ್ದು ಇದರ ಭೂಮಿ ಪೂಜೆಯನ್ನು ಶಾಸಕರು ನೆರವೇರಿಸಿದರು. ಬಹಳಷ್ಟು ಕಾರ್ಯಕ್ರಮಗಳು ಘೋಷಣೆ ಆಗತ್ತವೆ ಆದರೆ ಅನುಷ್ಠಾನಕ್ಕೆ ತರುವದು ಅಷ್ಟು ಸುಲಭದ ವಿಷಯವಲ್ಲ, ಮೊದಲು ಧಾರವಾಡದಲ್ಲಿ ಮಾತ್ರ ಇಂತ ಕೋರ್ಸ್ಗಳನ್ನು ನೋಡುತ್ತಿದ್ದೆವು ಆದರೆ ಇಂದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಮತ್ತು ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರಕಿಸಿ ಕೊಡಲು ಈ ತರಬೇತಿ ಕೇಂದ್ರವನ್ನ ಪ್ರಾರಂಭ ಮಾಡಿದ್ದೇವೆ. ಎಸ್ ಎಸ್ ಎಲ್ ಸಿ ಮತ್ತು ಐಟಿಐ ಮುಗಿದವರಿಗೆ ಉತ್ತಮ ಶಿಕ್ಷಣ ಪಡೆಯಲು ಸಹಕಾರಿ. ಜನರಿಗೆ ಅವರ ಸೌಲಭ್ಯಗಳನ್ನು ಮುಟ್ಟಿಸುವ ಕೆಲಸ ಮಾಡುವದು ನಮ್ಮ ಸರ್ಕಾರದ ಕನಸು ಎಂದು ಹೇಳಿದರು.


