ಭರ್ಜರಿಯಾಗಿ ತೆರೆ ಕಂಡ ಪಪ್ಪಿ ಸಿನಿಮ

graochandan1@gmail.com
1 Min Read

ಗಜೇಂದ್ರಗಡ: ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ಹೊಂದಿರುವ ಪಪ್ಪಿ ಚಲನಚಿತ್ರವು ನಗರದ ಅಲಂಕಾರ ಟಾಕೀಸ್ ಸೇರಿದಂತೆ ರಾಜ್ಯಾದ್ಯಂತ 65 ರಿಂದ 75 ಚಲನಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿದು ಭರ್ಜರಿ ಆರಂಭ ಪಡೆದಿದೆ

ಬಿ.ಬಿ.ಸುಂಕನೂರ್ ಬ್ಯಾನರ್ ಅಡಿಯಲ್ಲಿ ಗಜೇಂದ್ರಗಡದ ಅಂದಪ್ಪ ಸಂಕಾನೂರ ನಿರ್ಮಾಣದಲ್ಲಿ ಹಾಗೂ ರಚನೆ & ನಿರ್ದೇಶನ – ಆಯುಷ್ ಮಲ್ಲಿ ಮೂಡಿಬಂದಿರುವ‌ ಚಿತ್ರ ಹೊಸಪೇಟೆ, ಗಂಗಾವತಿಯ ಗ್ರಾಮೀಣ ಭಾಷಾ ಸೊಗಡು ಹೊಂದಿರುವ ಹಾಸ್ಯಮಯ ಚಿತ್ರ

ಈ ಚಿತ್ರದಲ್ಲಿ ಕೊಪ್ಪಳ ಜಿಲ್ಲೆಯ ಹಾಲವರ್ತಿ ಗ್ರಾಮದ ಜಗದೀಶ, ಸಿಂಧನೂರಿನ ಆದಿತ್ಯ ಬಾಲನಟರು ಸೇರಿದಂತೆ ರೇಣುಕಾ ದೇಸಾಯಿ, ದುರಗಪ್ಪ ಕಾಂಬಳೆ ಅವರುಗಳು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಉತ್ತರ ಕರ್ನಾಟಕದ ಭಾಷೆಯ ಚಲನಚಿತ್ರವನ್ನು ಜಗತ್ತಿಗೆ ತೋರಿಸಬೇಕು. ಬೆಂಗಳೂರಿಗೆ ವಲಸೆ ಹೋಗಿ ಜೀವನ ನಡೆಸುವ ಕುಟುಂಬ ಮತ್ತು ಶ್ರೀಮಂತರ ಮನೆಯಲ್ಲಿ ಬೆಳೆದ ನಾಯಿಯ ಜೊತೆಗಿನ ಪ್ರೀತಿ ವಾತ್ಸಲ್ಯ ಜೀವನ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ

ಈ ಚಿತ್ರವನ್ನು ಬೆಂಗಳೂರು, ಗದಗ ಹಾಗೂ ಹೊಸಪೇಟೆ ಸೇರಿದಂತೆ ವಿವಿಧ ಭಾಗಗಳಲ್ಲಿ ಶೋಟಿಂಗ್ ಮಾಡಲಾಗಿದೆ. ಉತ್ತರ ಕರ್ನಾಟಕದ ಕಲಾವಿದರಿಂದ ನಿರ್ಮಾಣವಾದ ಚಿತ್ರ.

- Advertisement -
Ad image

ಈ ಸಂದರ್ಭದಲ್ಲಿ ಅವಿನಾಶ್ ಕೊಟಗಿ,ಕೃಷ್ಣ ಶಿಂಗ್ರಿ,ಶಿವಾನಂದ ಕುರಿ,ಅಂಬರೀಶ್ ಅಂಗಡಿ,
ನಿತೀಶ್ ವೇಣೇಕರ,ವಿನಾಯಕ್ ಮಸುಡಿ,ಅರುಣ ರಾಯಬಾಗಿ
ಇರ್ಫಾನ್ ಹಣಗಿ,ಮುನೀರ್ ಮುದಗಲ್,ಸಂಗಮೇಶ್ ವಸ್ತದ,
ಅನುರಾಗ್ ಚಿನಿವಾರ್ ಇತರರೂ ಉಪಸ್ಥಿತರಿರುವರು

Share this Article