ಅಖಿಲ ಭಾರತ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷರಿಂದ ಜಾತಿಗಣತಿ ವೇಳೆ ಬಂಜಾರ (ಲಂಬಾಣಿ) ಎಂದು ಬರೆಸುವಂತೆ ಕರೆ

graochandan1@gmail.com
1 Min Read

ಉತ್ತರಕನ್ನಡ : ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಮೀಸಲಾತಿ ವರ್ಗೀಕರಣಕ್ಕೆ,ನ್ಯಾ.ನಾಗಮೋಹನದಾಸ್ ನೇತೃತ್ವದಲ್ಲಿ ಆಯೋಗ ರಚನೆಮಾಡಿದ್ದು.ಆಯೋಗದ ನಿರ್ದೇಶನದಂತೆ ಮೇ.5 ರಿಂದ 17 ರವರೆಗೆ ಜಾತಿಜನಗಣತಿ ನಡೆಸುತ್ತಿದ್ದು.ಜನಗಣತಿಗೆ ಬಂದ ಸಂದರ್ಭದಲ್ಲಿ ಬಂಜಾರ(ಲಂಬಾಣಿ)* ಎಂದು ಬರೆಸುವಂತೆ ಸಲಹೆ ನೀಡಿದ್ದಾರೆ.
ಬಂಜಾರ,ಲಂಬಾಣಿ ಜನಾಂಗದ ವರು ಯುಗಾದಿ ಹಬ್ಬವಾದ ನಂತರ ಕೂಲಿಗಾಗಿ ವಲಸೆ ಹೋಗುವಂತಹ ಪದ್ಧತಿಯಿದ್ದು.ಯಾರು ಕೂಡ ಜಾತಿಜನಗಣತಿಯಿಂದ ಹೊರಗಡೆ ಉಳಿಯಬಾರದು ಎಂಬ ಸದುದ್ದೇಶದಿಂದ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ರಾಜ್ಯಾದ್ಯಂತ ಸಂಚರಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಬಂಜಾರ,ಲಂಬಾಣಿ,ಸಮುದಾಯದವರು,ಗೋವಾ,ಕೇರಳ,ತೆಲಂಗಾಣ,ಬೆಂಗಳೂರು ಮತ್ತು ಕಾಫಿ ಸೀಮೆ,ಕಬ್ಬು ಕಟಾವು ಸಂದರ್ಭದಲ್ಲಿ ವಲಸೆಹೋಗಿ,ಜೀವನ,ನಡೆಸುವುದನ್ನು ಕಾಣುತ್ತೆವೆ .ಆ ಕಾರಣಕ್ಕೆ ಈಗಾಗಲೇ ಆಯೋಗದ ಗಮನಕ್ಕೆ ತರಲಾಗಿದ್ದು.ಅತುರಾತುರದಿಂದ ಸಮೀಕ್ಷೆ ಮುಗಿಸದೆ ದೀಪಾವಳಿ ಹಬ್ಬದವರೆಗೂ ಕಾದು ಸಮೀಕ್ಷೆ ಮಾಡಲು ಮನವಿ ಮಾಡಿಕೊಳ್ಳಲಾಗಿದೆ ಅಷ್ಟೇ, ಅಲ್ಲದೇ ಬಂಜಾರ ಸಮಾಜದ ಮುಖಂಡರು ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣಕ್ಕಾಗಿ ನಡೆಯುತ್ತಿರುವ ಸಮೀಕ್ಷೆ ಲಗುಬಗೆಯಿಂದ ನಡೆಸುವಂತೆ ಕಾಣುತ್ತಿದೆ ಲಂಬಾಣಿ ಸಮಾಜ ಜೀವನಕ್ಕಾಗಿ ವಲಸೆ ಹೋಗುವುದನ್ನು ಪರಂಪರೆಯಿಂದ ರೂಢಿಸಿಕೊಂಡಿದ್ದು.ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಸ್ವಂತ ಗ್ರಾಮಗಳಲ್ಲಿ ಲಭ್ಯವಾಗುವುದಿಲ್ಲ ಹಾಗೆಯೇ ಪರಿಶಿಷ್ಟರ ಒಂದು ಸಮುದಾಯ ಒತ್ತಡ ತಂದು ಮೀಸಲಾತಿ ಜಾರಿ ಮಾಡಿಸಲು ನಡೆಸುತ್ತಿರುವ ಪ್ರಯತ್ನ ನಿಜಕ್ಕೂ ರಾಜಕೀಯ ಪ್ರೇರಿತವಾಗಿದೆ ಎಂದರು ಹಾಗಾಗಿ ನಮ್ಮ ಬಂಜಾರ ಸಮಾಜಕ್ಕೆ ಸರಿಯಾದ ನ್ಯಾಯ ದೊರೆಯುವಂತಾಗಲಿ ಎಂದು ಹಾರೈಸಿದ್ದಾರೆ.

Share this Article