ಹುಲಕೋಟಿ: ಇಲ್ಲಿನ ಕೆ ಹೆಚ್ ಪಾಟೀಲ್ ಸೆಂಟರ್ ಫಾರ್ ಹ್ಯೂಮನ್ ಎಕ್ಸೆಲೆನ್ಸ್ ಸ್ವಾಮಿ ವಿವೇಕಾನಂದ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ 2024 -25 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಕಾಲೇಜಿನ ಒಟ್ಟಾರೆ ಫಲಿತಾಂಶ 92,06 % ರಷ್ಟು ಬಂದಿದೆ. ವಿಷಯವಾರು ಫಲಿತಾಂಶ ಕನ್ನಡ ,ಇಂಗ್ಲೀಷ , ಹಿಂದಿ ,ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯಗಳಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿರುವುದು ವಿಶೇಷವಾಗಿದೆ.

ಮಹಾವಿದ್ಯಾಲಯದಿಂದ ಒಟ್ಟು 64 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 12 ವಿದ್ಯಾರ್ಥಿಗಳು ಪ್ರಶಸ್ತಿ ಸಹಿತ ಪ್ರಥಮ ಶ್ರೇಣಿ 41 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ತೇರ್ಗಡೆ ಹೊಂದಿದ್ದಾರೆ.
ವಿದ್ಯಾರ್ಥಿನಿಯಾದ ಕುಮಾರಿ ಮಧು ಹಳೇಮನಿ ಶೇಕಡಾ 96 ರಷ್ಟು ಫಲಿತಾಂಶ (PCMB ಯಲ್ಲಿ 97 .25 %) ಪಡೆದು ಕಾಲೇಜಿಗೆ ಪ್ರಥಮಸ್ಥಾನ, ಕುಮಾರ ಸೂರಜ್ ಕರಿಯಣ್ಣವರ ಗಣಿತ ವಿಷಯದಲ್ಲಿ 100 ಕ್ಕೆ 100 ರಷ್ಟು ಅಂಕ ಗಳಿಸುವುದರೊಂದಿಗೆ ಶೇಕಡಾ 92 ರಷ್ಟು (PCMB ಯಲ್ಲಿ 96,75 %) ಫಲಿತಾಂಶ ತೋರಿ ಕಾಲೇಜಿಗೆ ದ್ವಿತೀಯಸ್ಥಾನ, ಕುಮಾರಿ ರಾಣಿ ಚಿಕ್ಕನ ಗೌಡರ 91 ರಷ್ಟು ಫಲಿತಾಂಶದೊಂದಿಗೆ ಕಾಲೇಜಿಗೆ ತೃತೀಯ ಸ್ಥಾನ , ಕುಮಾರಿ ತಸ್ಮಿಯಾ ಫಾತಿಮಾ ಮುಳಗುಂದ 9೦.50% ರಷ್ಟು ಫಲಿತಾಂಶ ಗಳಿಸಿ ಕಾಲೇಜಿಗೆ ನಾಲ್ಕನೇ ಸ್ಥಾನ, ಕುಮಾರ ಸುರೇಶ ನವಲಿ 89 % ರಷ್ಟು ಫಲಿತಾಂಶ ಪಡೆದು ಕಾಲೇಜಿಗೆ ಐದನೇ ಸ್ಥಾನ ಗಳಿಸಿದ್ದಾನೆ. ಹಾಗೂ ಕುಮಾರಿ ನಿವೇದಿತಾ ಮಡಿವಾಳರ ಕನ್ನಡ ವಿಷಯದಲ್ಲಿ 100ಕ್ಕೆ 100 ಅಂಕ ಗಳಿಸಿ ಉತ್ತಮ ಸಾಧನೆಗೈದಿದ್ದಾಳೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು, ಸರ್ವಸದಸ್ಯರು ,ಪ್ರಾಚಾರ್ಯರು, ಉಪನ್ಯಾಸಕರು, ಹಾಗೂ ಉಪನ್ಯಾಸಕೇತರ ಸಿಬ್ಬಂದಿಗಳು ಅಭಿನಂದಿಸಿ ಶುಭ ಹಾರೈಸಿದ್ದಾರೆ.
