ಸಾಲ ನೀಡದ ಕಾರಣಕ್ಕೆ ಬ್ಯಾಂಕಿನಲ್ಲಿದ್ದ ಬರೋಬ್ಬರಿ 13 ಕೋಟಿ ಮೌಲ್ಯದ 17 ಕೆಜಿ ಚಿನ್ನ ಕದ್ದ ಕಳ್ಳರು

graochandan1@gmail.com
1 Min Read

ದಾವಣಗೆರಿ : ಸಾಲ ಕೊಡಲು ಬ್ಯಾಂಕ್ ಸಿಬ್ಬಂದಿ ನಿರಾಕರಣೆ ಮಾಡಿದ್ದ ಕಾರಣಕ್ಕೆ ಉದ್ಯಮಿಯೋಬ್ಬ ತಂಡ ರಚಿಸಿ ಇಡೀ ಬ್ಯಾಂಕನ್ನು ಗುಡಿಸಿ ಗುಂಡಾಂತರ ಮಾಡಿದ್ದ ಕಳ್ಳರನ್ನು ಹಿಡಿಯುವಲ್ಲಿ ದಾವಣಗೆರಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಘಟನೆ ಹಿನ್ನೆಲೆ:

ಬೇಕರಿ ಉದ್ಯಮ ಉನ್ನತಮಟ್ಟಕ್ಕೆ ಏರಿಸಲು ಎಸ್ ಬಿ ಐ ಬ್ಯಾಂಕನಲ್ಲಿ ಸಾಲಕ್ಕೆ ವಿಜಯ್ ಕುಮಾರ್ ಅರ್ಜಿ ಸಲ್ಲಿಸಿದ್ದರು ಕ್ರೇಡಿಟ್ ಸ್ಕೋರ್ ಕಡಿಮೆ ಹಿನ್ನೆಲೆಯಲ್ಲಿ ಬ್ಯಾಂಕ ಸಾಲದ ಅರ್ಜಿ ವಜಾ ಮಾಡಿದ್ದರು ಇದರಿಂದ ಕಂಗಾಲಾಗಿದ್ದ ವಿಜಯ್ ಕುಮಾರ್ ಕಳೆದ ವರ್ಷ ಅಕ್ಟೋಬರ್ 26 ರಂದು ಕಳ್ಳತನಕ್ಕೆ ಸ್ಕೆಚ್ ಹಾಕಿಕೊಂಡು ಗ್ಯಾಂಗ್ ಸೃಷ್ಟಿಸಿ ಕಳ್ಳತನ ಮಾಡಿದ್ದರು.

ಹಲವಾರು ಸಿನಿಮಾ, ಧಾರಾವಾಹಿ, ಯುಟ್ಯೂಬ್ ವಿಡಿಯೋ ನೋಡಿ ಕಳ್ಳತನಕ್ಕೆ ಪ್ಲಾನಿಂಗ್ ಮಾಡಿ ಸಿನಿಮಯ ರೀತಿಯಲ್ಲಿ ಕಳ್ಳತನ ಮಾಡಿ ಕದ್ದಿದ್ದ ಕೋಟಿ ಕೋಟಿ ರೂಪಾಯಿಯ ಚಿನ್ನಾಭರಣ ತಮಿಳು ನಾಡಿನ ಮದುರೈ ಪಕ್ಕದ ಹಳ್ಳಿಯ ತೋಟದಲ್ಲಿನ ಭಾವಿಯಲ್ಲಿ ಮುಚ್ಚಿಟ್ಟಿದ್ದ ವಿಜಯಕುಮಾರ ಜೊತೆಗೆ ಕಳ್ಳತನಕ್ಕೆ ಗಡಿಚೌಡಮ್ಮಗೆ ಅಷ್ಟದಿಗ್ಬಂಧನ ಪೂಜೆ ಮಾಡಿಸಿದ್ದ ಚಾಲಾಕಿ ಕಳ್ಳರು ಇದು ಇವರ ಮೊದಲ ಕಳ್ಳತನವಾಗಿದ್ದು ವ್ಯವಸ್ಥಿತವಾಗಿ ಕಳ್ಳತನ ಮಾಡಿದ್ದು ನೋಡಿ ಸ್ವತಃ ಪೊಲೀಸರೆ ಶಾಕ ಆಗಿದ್ದಾರೆ.

- Advertisement -
Ad image

ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ವಿರುವ ಎಸ್ ಬಿ ಐ ಬ್ಯಾಂಕ್ ನ ಕಳ್ಳತನ ಪ್ರಕರಣವು ಪೋಲಿಸರಿಗೆ
ಕಬ್ಬಿಣದ ಕಡಲೆಯಾಗಿದ್ದು ಆರು ಜನ ಕಳ್ಳರನ್ನು ಹಿಡಿದು ಚಿನ್ನಾ ಭರಣಗಳೊಂದಿಗೆ 13 ಕೋಟಿ ಮೌಲ್ಯದ 17 ಕೆಜಿ ಚಿ‌ನ್ನ ವಶಕ್ಕೆ ಪಡೆದ ಪೋಲಿಸರು.

ಕಳ್ಳತನ ಕೇಸ್ ಭೇದಿಸಿದ ರೋಚಕತೆ ವಿವರಣೆ ನೀಡಿದ ಐಜಿ ರಜನೀಕಾಂತೆಗೌಡ್ ಸೋಮವಾರ ಅಕ್ಷರಶಃ ಜ್ಯೂವೇಲರಿ ಶಾಫ್ ರೀತಿಯಂತೆ ಕಾಣುತ್ತಿತ್ತು ದಾವಣಗೆರೆ ಎಸ್ಪಿ ಕಛೇರಿ.

ವಿಜಯಕುಮಾರ್(30), ಅಜಯ್ ಕುಮಾರ್(28,) ಅಭಿಷೇಕ(23) ಚಂದ್ರು(,23)ಮಂಜುನಾಥ್( 32) ಪರಮಾನಂದ (30) ತಮಿಳುನಾಡಿನ ಮೂವರು, ನ್ಯಾಮತಿ ಪಟ್ಟಣದ ಮೂವರು ಸೇರಿ ಒಟ್ಟು ಆರು ಜನರ
ಬಂಧಿತ ಆರೋಪಿಗಳಾಗಿದ್ದಾರೆ.

ಪೋಲಿಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Share this Article