ಬಾಗಲಕೋಟ: ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಮೂವರು ಬಾಲಕರು ನೀರು ಪಾಲಾದ ಘಟನೆ ಸೀತಿಮನಿ ಗ್ರಾಮದ ಬಳಿ ಭಾನುವಾರ ನಡೆದಿದೆ.
ಸೋಮಶೇಖರ್ ದೇವರಮನಿ(೧೫),ಪರನಗೌಡ ಬೀಳಗಿ(೧೭)ಮಲ್ಲಪ್ಪ ಬಗಲಿ(೧೬) ಮೃತರು ಎಂದು ಗುರುತಿಸಲಾಗಿದೆ.
ಬಾಲಕ ಸೋಮಶೇಖರ್ ನ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬನ ಪತ್ತೆಗೆ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ಬಾಲಕರು ಬಾಗಲಕೋಟೆ ಇಲ್ಯಾಳ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

