ರೈತರ ಅರ್ಜಿಗಿಲ್ಲ ಕವಡೆಕಾಸಿನ ಕಿಮ್ಮತ್ತು: ಕಾಣದ ಕೈಗಳ ಆಟದಲ್ಲಿ ಯಾರನ್ನೋ ರಕ್ಷಿಸುವ ಉದ್ದೇಶ..?

graochandan1@gmail.com
3 Min Read
Oplus_16908288

ಗದಗ: ಅಡವಿಸೋಮಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾಪನಾಶಿ ಗ್ರಾಮದಲ್ಲಿ ಏಕ ನಿವೇಶನದ ವಾಣಿಜ್ಯ ವಿನ್ಯಾಸಕ್ಕೆ ಸಂಬಂಧಪಟ್ಟಂತೆ 87 ಇ ಸ್ವತ್ತು ಉತಾರ ಪೂರೈಸಿದ ಪ್ರಕರಣಕ್ಕೆ ಸಂಭಂದಿಸಿದಂತೆ ಕಾಣದ ಕೈಗಳ ಆಟಗಳು ಜೋರಾಗಿ ನಡೆದಿದ್ದು ಯಾರನ್ನೋ ರಕ್ಷಿಸಲು ಕಾಣದ ಕೈಗಳ ಆಟಗಳು ತೆರೆಮೆರೆಯಲ್ಲಿ ಜೋರಾಗಿ ನಡೆದಿದ್ದು ಇದರ ನಡುವೆಯೂ ಅಧಿಕಾರಿಗಳು ಹಾಗೂ ಕೆಲ ಗ್ರಾಮ ಪಂಚಾಯತ ಸದಸ್ಯರು ಜಮೀನಿನ ಮಾಲೀಕರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಪರಿಣಾಮ ಮುಂದಿನ ದಿನಗಳು ನಮ್ಮ ಜಮೀನಿಗೆ ದಾರಿಯಾವುದಯ್ಯ ದಾರಿ ನೀಡಿ ಎಂದು ಗೋಗರಿದಿದ್ದಾರೆ.

ರೈತರ ಮಾತಿಗೆ ಕ್ಯಾರೇ ಎನ್ನದ ಜಮೀನಿನ ಮಾಲೀಕರು :

ಪಾಪನಾಶಿ ಗ್ರಾಮದ ರಿಸ 28/1 ಕ್ಷೇತ್ರ :1 ಎಕರೆ 15 ಗುಂಟೆ ,ರಿಸ ನಂ:28/2ಬ ಕ್ಷೇತ್ರ : 3 ಎಕರೆ 19 ಗುಂಟೆ,ರಿಸ ನಂ:31/2ಅ ಕ್ಷೇತ್ರ : 7 ಎಕರೆ 30 ಗುಂಟೆ,ರಿಸ ನಂ:31/2ಬ ಕ್ಷೇತ್ರ : 2 ಎಕರೆ 27 ಗುಂಟೆ,ರಿಸ ನಂ:31/3 ಕ್ಷೇತ್ರ : 3 ಎಕರೆ 21 ಗುಂಟೆ ಒಟ್ಟು :18 ಎಕರೆ 32 ಗುಂಟೆ, ಗದಗ ಮೂಲದ ಬಾಕಳೆ ಹಾಗೂ ಇತರರು ಜಮೀನಿನ ಮಾಲೀಕರಾಗಿದ್ದು ತಮ್ಮ ಬುದ್ದಿ ಬಲ ಹಣ ಬಲದಿಂದ ಈಗಾಗಲೇ ಸರ್ಕಾರ ಕೆಲ‌ನೀತಿ ನಿಯಮ ಗಾಳಿಗೆ ತೂರಿ ಪಂಚಾಯತ ಅಧಿಕಾರಿಗಳನ್ನು ಹಾಗೂ ಕೆಲ‌ಸ ಸದಸ್ಯರೊಂದಿಗೆ ಅರ್ಜಿ ನೀಡಿದ್ದೆ ಒಂದು ಕೆಲಸ ಮಾಡಿಸಿದ್ದೇ ಇನ್ನೋಂದು ತಮ್ಮ ಕೆಲಸ ಆದರೆ ಆಯಿತು ಯಾರಾದರು ಹೇಗಾದರು ಹಾಳಗಿ ಹೋಗಲಿ ಎಂದು ಕಾರ್ಯಸಾಧಿಸಿಯೇ ತಿರುತ್ತೇನೆ ಎಂದು ಹಠಕ್ಕೆ ಬಿದ್ದಂತಿದೆ ಇವರು ನಿರ್ಮಾಣ ಮಾಡುತ್ತಿರುವ ವಿನ್ಯಾಸದಲ್ಲಿ ಸುತ್ತ ಮುತ್ತಲು ರೈತರು ಭೂಮಿ ಸಾಗುವಳಿ ಮಾಡುತ್ತಿದ್ದು ಅವರಿಗೆ ಅವರ ಸಾಗುವಳಿಗೆ ಹೋಗಲು ಬರಲು ಅಧಿಕೃತವಾದ ರಸ್ತೆಯೇ ಇಲ್ಲ ನಾವು ಸಾಕಷ್ಟು ಬಾರಿ ಮಾಲೀಕರಿಗೆ ಹಾಗೂ ಇಲ್ಲಿ ಕೆಲಸ ಮಾಡುವವರಿಗೆ ಕೇಳಿದರು ಯಾರು ನಮಗೆ ಸ್ಪಂದನೆ ನೀಡುತ್ತಿಲ್ಲ ಮುಂದೆ ನಮ್ಮ ಜಮೀನಿಗೆ ರಸ್ತೆ ನೀಡುವವರು ಯಾರು ಈ ಬಗ್ಗೆ ಕೇಳಬೇಕಾದ ಅಧಿಕಾರಿಗಳೇ ಗಪ್ಪ ಚುಪ್ಪ ಆಗಿದ್ದಾರೆ ಎಂದು ರೈತರಾದ ಕುಮಾರ ಸ್ವಾಮಿ ಹೀರೆಮಠ ಹಾಗು ಅನೇಕರು ಸಮಗ್ರ ಪ್ರಭ ಪತ್ರಿಕೆಗೆ ಜೊತೆಗೆ ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ.

ರೈತರ ಮನವಿಗೆ ಕಿಮ್ಮತ್ತು ನೀಡದ ಪಂಚಾಯತ ಅಧಿಕಾರಿಗಳು:
ಈ ಪ್ರಕರಣದ ಕುರಿತು ದಿನಾಂಕ 13-12-2024 ರಲ್ಲಿ ಇಲ್ಲಿ ನಿರ್ಮಾಣ ಆಗುತ್ತಿರುವ ವಿನ್ಯಾಸದಲ್ಲಿ ಅಧಿಕೃತವಾದ ರಸ್ತೆಗಳಿಲ್ಲ ಕೂಡಲೇ ಇಲ್ಲಿ ನಿರ್ಮಾಣ ಆಗುತ್ತಿರುವ ಲೇಜೌಟ ಬಂದ ಮಾಡಿಸಿ ಅಧಿಕೃತ ವಿನ್ಯಾಸ ಮಾಡಿಸಿಕೊಂಡಿ ಅಂದಾಗ‌ ನಮಗೆ ವ್ಯವಸಾಯ ಮಾಡಲು ಹೋಗಲು ಬರಲು ರಸ್ತೆ ಸಿಗುತ್ತದೆ ನಾವು ಸಾಕಷ್ಟು ಬಾರಿ ಮಾಲೀಕರಾದ ಬಾಕಳೆ ಹಾಗೂ ಇತರರಿಗೆ ಹೇಳೀದರು ಅವರು ನಿಮಗೆ ಇಲ್ಲಿ ರಸ್ತೆ ಬಂದಿರುವುದಿಲ್ಲ ಎಂದು ಹೇಳಿದ್ದು 4 ತಿಂಗಳಿಂದ ನಾವು ಮನವಿ ಮಾಡಿದ್ದರು ನಮಗೆ ಸ್ಪಂದಿಸುತ್ತಿಲ್ಲ ಎಂದು 10ಕ್ಕು ಹೆಚ್ಚು ರೈತರು ಈ ಕುರಿತು ತಕರಾರು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿದ್ದಾರೆ ಆದರೆ ಇದಕ್ಕು ಸೊಪ್ಪು ಹಾಕದ ಅಧಿಕಾರಿಗಳು ರೈತರಿಗೆ ನಿಮ್ಮ ಅರ್ಜಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಿದ್ದೇವೆ ಅದು ಬರೋವವರೆಗೆ ಕಾಯಿರಿ ನೋಡೋಣ ಅಂತಾ ಸಬೂಬೂ ಹೇಳಿ ಕಳುಹಿಸುತ್ತಾರೆ.

- Advertisement -
Ad image

ತಕ್ಷಣ ಕ್ರಮ ಕೈಗೊಳ್ಳಲುವಂತೆ ರೈತರ ಆಗ್ರಹ:

ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭರತ್ ಎಸ್ ಜಿಲ್ಲಾ ಪಂಚಾಯತ ಸಹಾಯಕ ಕಾರ್ಯದರ್ಶಿ ಕಲ್ಮನಿ ಅವರಿಗೆ ಸ್ಥಳ ವೀಕ್ಷಣೆ ಮಾಡಿ ಈ ಕುರಿತು ವರದಿ ಸಲ್ಲಿಸಲು ಆದೇಶ ನೀಡಿದ್ದರು ಯಾವುದೇ ಕೆಲಸ ಮಾತ್ರ ಇನ್ನು ಆಗಿಲ್ಲ ಸದ್ಯ ತಾಲೂಕು ಪಂಚಾಯತ ಇಓ ಹಾಗೂ ತಾಲೂಕು ಕೃಷಿ ಅಧಿಕಾರಿಯಾಗಿರುವ ಮಲಯ್ಯ ಕೋರವನವರ ರೈತರ ಸಾಗುವಳಿಗೆ ಇದರಿಂದ ಆಗುವ ಸಮಸ್ಯೆಗಳ ಬಗ್ಗೆ ಅರಿವಿದ್ದು ಕೂಡಲೇ ಅಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಲು ಕ್ರಮ ವಹಿಸಬೇಕು.

ಕ್ರಮ ಕೈಗೊಳ್ಳಲು ಹೈ ಡ್ರಾಮಾ :

ಅಧಿಕೃತ ಏಕ ನಿವೇಶನದ ವಿನ್ಯಾಸದಲ್ಲಿ ಅನಧಿಕೃತ ಬಹು ನಿವೇಶನಗಳ ಇಸ್ವತ್ತು ನೀಡಿದ್ದ ಒಂದೇ ಕಾರಣ ಸಾಕು ಇಸ್ವತ್ತು ನೀಡಿದವರ ಮೇಲೆ ಕ್ರಮ ಕೈಕೊಳ್ಳಲು ಎಲ್ಲ ಸಾಕ್ಷಿ ಪುರಾವೆ ಕಣ್ಣಮುಂದೇ ಇದ್ದರೂ ಕ್ರಮ ಕೈಗೊಳ್ಳಲು ಹೈಡ್ರಾಮಾ ಮಾತ್ರಾ ನಡೆಯುತ್ತಲೇ ಇದೆ ಇದರ ಹಿಂದೆ ಅಧಿಕಾರಿಗಳ ಜಾಣ ನಡೆಯ ಜೊತೆಗೆ ಯಾರನ್ನೋ ರಕ್ಷಿಸುವ ಉದ್ದೇಶವಿದೆ ಅನ್ನೋದು ಮಾತ್ರ ತಳ್ಳಿಹಾಕುವಂತಿಲ್ಲ.

Share this Article