ಒಂದೇ ಏಕ ನಿವೇಶನಕ್ಕೆ ಅಕ್ರಮವಾಗಿ 87 ಕಂಪ್ಯೂಟರ್ ಉತಾರ…?ಪಿಡಿಓ ವಿರುದ್ದ ಲೋಕಾಯುಕ್ತದಲ್ಲಿ ದೂರು ದಾಖಲು

graochandan1@gmail.com
4 Min Read
Oplus_131072

ಗದಗ: ತಾಲೂಕಿನ ಅಡವಿಸೋಮಾಪುರ ಗ್ರಾಮದಲ್ಲಿ ವಸತಿ ವಿನ್ಯಾಸ ವಿಲ್ಲದೇ ಏಕ ನಿವೇಶನಕ್ಕೆ ಅನುಮೋದನೆ ನೀಡಿದ ಜಮೀನಿಗೆ ಸದ್ದು ಗದ್ದಲವಿಲ್ಲದೆ ಭೂ ಮಾಲೀಕರೊಂದಿಗೆ ಕೈ ಜೋಡಿಸಿ ಒಂದಲ್ಲಾ ಎರಡಲ್ಲಾ ಬರೊಬ್ಬರಿ 87 ಕಂಪ್ಯೂಟರ್ ಉತಾರಗಳನ್ನು ಅನಧಿಕೃತವಾಗಿ ನೀಡಿದ್ದಾರೆ ಎಂದು ಆರೋಪಿಸಿ ಅಡವಿಸೋಮಾಪುರ ಗ್ರಾಮದ ಪಿಡಿಓ ಪ್ರೇಮಾ ಹಟ್ಟಿ ಮತ್ತು ಎಸ್ ಡಿ ಎ,ಸಿ ಬಿ ಜಾನೋಪಂತಾರ ವಿರುದ್ಧ ಗದಗ ಲೋಕಾಯುಕ್ತ ಕಚೇರಿಗೆ ಕಳೆದ ಒಂದು ತಿಂಗಳ ಹಿಂದೆಯೇ ದೂರು ದಾಖಲಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಅಡವಿಸೋಮಾಪುರ ಗ್ರಾಮ ಪಂಚಾಯತ ನಲ್ಲಿ ಕಳೆದ ಒಂದು ದಶಕದಿಂದ ಎಲ್ಲೂವು ಸರಿ ಇಲ್ಲ ಅನೋದು ಏನು ಹೊಸದಲ್ಲ ಚುನಾಯಿತ ಸದಸ್ಯರ ನಡುವೇ ಹೊಂದಾಣಿಕೆ ಇಲ್ಲದೆ ಯಾವಬ್ಬೋ ಅಧಿಕಾರಿಯು ಇಲ್ಲಿ ಸಂಪೂರ್ಣ ಕಾರ್ಯಭಾರ ಮಾಡದೇ ಎಷ್ಟೋ ತಿಂಗಳುಗಳ ಕಾಲ ಹಿರಿಯ ಅಧಿಕಾರಿಗಳ ಒತ್ತಾಯದ ಮೇರೆಗೆ ಪ್ರಬಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಒಂದೊಮ್ಮೆ ಗ್ರಾಮ ಪಂಚಾಯತನ ಅವ್ಯವಹಾರ ಕುರಿತು ತನಿಖೆಗೆ ಇಳಿದರೆ ಯಾರ ಯಾರ ಕೈವಾಡ ಇದೆಯೋ ಬಲ್ಲವರಾರು.

ಈ ಪೈಕಿ ಈಗ ಖಾಸಗಿ ಲೇಜೌಟ ಮಾಲೀಕರೊಂದಿಗೆ ಇದೇ ಗ್ರಾಮ ಪಂಚಾಯತ ಅಧಿಕಾರಿ ಪ್ರೆಮಾ ಹಟ್ಟಿ ಅನಧಿಕೃತವಾಗಿ 87 ಕಂಪ್ಯೂಟರ ಉತಾರ  ನೀಡಿದ್ದಾರೆ ಈ ಕುರಿತು ಸಾರ್ವಜನಿಕ ಮಾಹಿತಿ ಹಕ್ಕಿನಡಿ ಅಶೋಕ ಮೇಟಿ ಅರಿಗೆ ಒದಗಿಸಿದ ದಾಖಲೆಯಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಸರ್ಕಾರಿ ನಿಯಮ ಪಾಲಿಸದೇ ಕಾರ್ಯ ನಿರ್ವಹಿಸಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ.
ವಿಶೇಷ ಎಂಬಂತೆ ಈ ಕುರಿತು ತಾಲೂಕು ಇಓ ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಇವರ ನೀಡಿದ ಅನಧಿಕೃತ ಕಂಪ್ಯೂಟರ್ ಉತ್ತಾರ ಸಲುವಾಗಿ 3 ಪಾರ್ಟಿ ಇನ್ವೆಸ್ಟಿಗೆಷನ್ ಹಾಕಲು ಗ್ರಾಮ ಪಂಚಾಯತ ಠರಾವು ಕೂಡಾ ಮಾಡಲಾಗಿದ್ದು ಸದರಿ ಪ್ರಕರಣಕ್ಕೆ ಸಂಭಂದಿಸಿದಂತೆ ಅಶೋಕ ಮೇಟಿ ವಿವಿಧ ದಾಖಲೆಗಳೊಂದಿಗೆ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದಾರೆ.

- Advertisement -
Ad image

ಯಾವ ಜಮೀನು ..? ಏನಿದು ಖಾಸಗಿ ಲೇಜೌಟ ಕಥೆ..!

ಅಡವಿಸೋಮಾಪುರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಪಾಪನಾಶಿ ಗ್ರಾಮದ ರಿಸ ನಂ:28/1 ಕ್ಷೇತ್ರ : 1 ಎಕರೆ 15 ಗುಂಟೆ,ರಿಸ ನಂ:28/2ಬ ಕ್ಷೇತ್ರ : 3 ಎಕರೆ 19 ಗುಂಟೆ,ರಿಸ ನಂ:31/2ಅ ಕ್ಷೇತ್ರ : 7 ಎಕರೆ 30 ಗುಂಟೆ,ರಿಸ ನಂ:31/2ಬ ಕ್ಷೇತ್ರ : 2 ಎಕರೆ 27 ಗುಂಟೆ,ರಿಸ ನಂ:31/3 ಕ್ಷೇತ್ರ : 3 ಎಕರೆ 21 ಗುಂಟೆ ಒಟ್ಟು :18 ಎಕರೆ 32 ಗುಂಟೆ ಜಮೀನಿಗೆ ಜಿಲ್ಲಾಧಿಕಾರಿಗಳಿಂದ ವಾಣಿಜ್ಯ ಉದ್ದೇಶಕ್ಕಾಗಿ (ರೆಸಾರ್ಟ್/ಹೆಲ್ತ ರೆಸಾರ್ಟ್) ಎಂದು 31/03/2020 ಭೂ ಪರಿವರ್ತನೆ ಆದೇಶ ನೀಡಿದ್ದು ಸದರಿ ಜಮೀನಿಗೆ ಸದರಿ ಜಮೀನಿಗೆ ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆ ಏಕ ನಿವೇಶನ ಉದ್ದೇಶಕ್ಕಾಗಿ ದಿನಾಂಕ 6-8-2021 ರಂದು 18 ಎಕರೆ 32 ಗುಂಟೆ ಜಮೀನಿಗೆ ವಿನ್ಯಾಸ ನಕ್ಷೆ ಅನುಮೋದನೆ ನೀಡಿರುತ್ತಾರೆ,ಭೂ ದಾಖಲೆ ಇಲಾಖೆಯಿಂದ ಕ.ಜ.ಪ ಕೂಡಾ ಏಕ ನಿವೇಶನಕ್ಕೆ ಅನುಮೋದನೆ ಆಗಿರುತ್ತದೆ ಸದರಿ ಕ್ಷೇತ್ರಕ್ಕೆ ಅಡವಿಸೋಮಾಪುರ ಗ್ರಾಮಪಂಚಾಯತಿ ಠರಾವು ಮಾಡಿ ಏಕ ನಿವೇಶನ ಉತ್ತಾರ ನೀಡಿ ಎಂದು ದಿನಾಂಕ : 19-1-2024 ರಂದು ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಿ ನಂತರ ಏಕ ನಿವೇಶನಕ್ಕೆ ಉತಾರ ನೀಡಲಾಯಿತು.

ಒಂದೇ ದಿನ 87 ಉತಾರ ನೀಡಿದ ಪಿಡಿಓ:

19-01-2024 ರ ಸಭೆಯಲ್ಲಿ ಮಂಡಿಸಿ ಠರಾವು ಪಾಸು ಮಾಡಿದ್ದು ವಿಷಯಕ್ಕೆ ವಿರುದ್ಧವಾಗಿ ಆಡಳಿತ ಮಂಡಳಿಗೆ ಗೋತಿಲ್ಲದಂತೆ ಪಿಡಿಓ ಹಾಗು ಕೆಲ ಅಧಿಕಾರಿಗಳು ಏಕ ನಿವೇಶ ಆದ ಜಮೀನಿಗೆ ಬಹು ನಿವೇಶನಕ್ಕೆ ದಿನಾಂಕ: 25/03/2025 ರಂದು ಕೇವಲ ಮೂರು ನಿಮಿಷಗಳ ಅವಧಿಯಲ್ಲಿ 11:10 ರಿಂದ 11:13 ಒಳಗೆ 87 ಉತಾರ ಪೂರೈಸಿದ್ದಾರೆ ಏಕ ನಿವೇಶನಕ್ಕೆ ಒಂದೇ ಉತಾರ ನೀಡಬೇಕು ಎಂಬ ನಿಯಮವಿದೆ.

ಆದರೆ 87 ಉತಾರ ಯಾವ ಆಧಾರದ ಮೇಲೆ ಪಿಡಿಓ ನೀಡಿದರು ಈ ಕುರಿತಂತೆ ನಗರ ಮತ್ತು ಗ್ರಾಮಾಂತರ ಯೋಜನಾ ಅಧಿಕಾರಿಗಳಿಗೆ ವಿನ್ಯಾಸ ಪರಿಷ್ಕೃತ ನಕ್ಷೆ ಕುರಿತು ಕೇಳಿದಾಗ ನಮ್ಮಿಂದ ಸದರಿ ಜಮೀನಿಗೆ ಏಕ ನಿವೇಶನಕ್ಕೆ ಮಾತ್ರ ವಿನ್ಯಾಸ ಅನುಮೋದನೆ ಮಾಡಲಾಗಿದ್ದು ಬಹು ನಿವೇಶನಕ್ಕೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹಾಗಾದರೆ 87ಉತಾರ ಯಾವ ಮಾನ ದಂಡದ ಆಧಾರದ ಮೇಲೆ ಪಿಡಿಓ ಪ್ರೇಮಾ ಹಟ್ಟಿ ನೀಡಿದರು ಇದರ ಹಿಂದೆ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಯಾರಾದರು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆಯೇ..? ಅಥವಾ ಎಲ್ಲಾ ಗೋತಿದ್ದು ಖಾಸಗಿ ಭೂ ಮಾಲೀಕರೊಂದಿಗೆ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎನ್ನು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

ತೆರಿಗೆ ವಂಚಿಸಿ ಅನ್ಯಾಯ ಮಾಡಿ ಮನಸೋಇಚ್ಚೆ ಪಿಡಿಓ ಕೆಲಸ:

ಅಡವಿಸೋಮಾಪುರ ಗ್ರಾಮದಲ್ಲಿ 18 ಎಕರೆ 32 ಗುಂಟೆ ಜಮೀನಿಗೆ ಏಕ ನಿವೇಶನಕ್ಕೆ ಬಹು ನಿವೇಶನದ ಕಂಪ್ಯೂಟರ್ ಉತಾರ ನೀಡುವ ಮೂಲಕ ಪಂಚಾಯತಿಗೆ ಟ್ಯಾಕ್ಸ ತುಂಬಿಸಿಕೊಳ್ಳದೆ ಹಾನಿ ಮಾಡಿದ್ದಾರೆ ಹಾಗೂ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ನೀತಿ ನಿಯಮಗಳನ್ನು ಗಾಳಿಗೆ ತೂರಿ ಪಿಡಿಓ ಹಾಗೂ ಸಿಬ್ಬಂದಿ ಅಕ್ರಮವ್ಯಸಗಿದ್ದಾರೆ ಈಗಾಗಲೇ ಈ ಕುರಿತು ಲೋಕಾಯುಕ್ತರಿಗೆ ದೂರು ನೀಡಿದ್ದೇನೆ.

-ಅಶೋಕ ಮೇಟಿ ,ದೂರುದಾರ

Share this Article