ಶಾಲಾ ಮಕ್ಕಳಿಗೆ ರಾಸಾಯನಿಕ ಮಿಶ್ರಿತ ಬಣ್ಣ ಎರಚಿದ ಪರಿಣಾಮ 8 ವಿದ್ಯಾರ್ಥಿಗಳು ಅಸ್ವಸ್ಥ

graochandan1@gmail.com
1 Min Read

ಗದಗ : ರಾಸಾಯನಿಕ ಮಿಶ್ರಿತ ಬಣ್ಣ ಎರಚಿದ ಪರಿಣಾಮವಾಗಿ 8 ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸುವರ್ಣಗಿರಿ ತಾಂಡಾ ದಲ್ಲಿ ನಡೆದಿದೆ.

ವಿದ್ಯಾರ್ಥಿನಿಯರು ಬಸ್ ಹತ್ತುವಾಗ ಹಿಂದಿನಿಂದ ಬಂದ ಕೆಲ ಕಿಡಗೇಡಿಗಳು ಬಸ್ ಹತ್ತುವ ಜಾಗದಲ್ಲಿ ರಾಸಾಯನಿಕ ಬಣ್ಣ ಎರಚಿರೋ ಹೋಗಿದ್ದಾರೆ.

ಬಣ್ಣದೊಂದಿಗೆ ಸಗಣಿ, ಮಣ್ಣು, ಮೊಟ್ಟೆ, ಗೊಬ್ಬರ ಸೇರಿ ರಾಸಾಯನಿಕ ಮಿಶ್ರಣ ಮಾಡಿರುವ ಶಂಕೆ ಇದ್ದು ವಿದ್ಯಾರ್ಥಿಗಳಿಗೆ ತೀವ್ರ ಎದೆನೋವು, ಉಸಿರಾಟ ತೊಂದರೆಯಿಂದ ಬಳಲುತ್ತಿದ್ದಾರೆ ಅಸ್ವಸ್ಥಗೊಂಡ ವಿದ್ಯಾರ್ಥಿನಿಯರಿಗೆ ಲಕ್ಷ್ಮೇಶ್ವರ ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಶಾಲೆಯ ಶಿಕ್ಷಕರು ಪೊಲೀಸರು ಆಸ್ಪತ್ರೆ ಬಂದಿದ್ದಾರೆ ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -
Ad image

Share this Article