ಗದಗ: ನಿಯೋಜನೆ ಹುದ್ದೆಯಿಂದ ಬಿಡುಗಡೆಗೊಂಡು ಮೂಲ ಸ್ಥಳಕ್ಕೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಿ ಎಂದು ಆದೇಶ ಮಾಡಿದ್ದರು ಆ ಆದೇಶಕ್ಕೆ ಕ್ಯಾರೆ ಎನ್ನದೇ ಮನಸೋ ಇಚ್ಛೆ ಕೆಲಸ ಮಾಡುತ್ತಿರುವ ಶಹರ ಆಹಾರ ಇಲಾಖೆ ನಿರೀಕ್ಷಕ ಎನ್ ಎರ್ ಚಿನ್ನಪ್ಪಗೌಡರ ಗೆ ಕಾರಣ ಕೇಳಿ ಜಿಲ್ಲಾಧಿಕಾರಿ ನೋಟಿಸ ಜಾರಿ ಮಾಡಿದ್ದಾರೆ.
ಈಗಾಗಲೇ ಸರ್ಕಾರ ಬೇರೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವವರನ್ನು ಅಲ್ಲಿಂದ ಬಿಡುಗಡೆಗೊಂಡು ಮಾತೃ ಇಲಾಖೆಯಲ್ಲಿಯೇ ಕಾರ್ಯನಿರ್ವಹಿಸಬೇಕು ಎಂದು ಆದೇಶಿಸಿದ್ದಾರೆ ಈ ಕುರಿತು ಸರ್ಕಾರದ ಸುತ್ತೋಲೆಯ ಪ್ರಕಾರ
ಜಿಲ್ಲಾಧಿಕಾರಿಗಳು ಸ್ಥಳೀಯ ತಹಶೀಲ್ದಾರರು ಅಧಿಕಾರಿಗಳಿಗೆ ನಿರ್ದೇಶನ ಕೂಡಾ ನೀಡಿದ್ದು ಅದಕ್ಕೂ ಕ್ಯಾರೆ ಅನ್ನದೇ ಮನಸೋ ಇಚ್ಛೆಯಂತೆ ಕಾರ್ಯ ನಿರ್ವಹಿಸಿದ ಶಹರ ಆಹಾರ ನಿರೀಕ್ಷಕ ಎನ್ ಆರ್ ಚಿನ್ನಪ್ಪಗೌಡರ ಗೆ ನೋಟಿಸು ಮುಟ್ಟಿದ್ದ 24 ಗಂಟೆಯಲ್ಲಿ ಉತ್ತರ ನೀಡುವಂತೆ ಜಿಲ್ಲಾಧಿಕಾರಿ ಹೇಳಿದ್ದಾರೆ.
ನೋಟಿಸ್ ನಲ್ಲಿ ಏನಿದೆ..!
ಗದಗ ಜಿಲ್ಲೆಯ ಕಂದಾಯ ಘಟಕದಲ್ಲಿ ತಮ್ಮ ಮೂಲ ಸ್ಥಳದಿಂದ ಅನ್ಯ ಕಛೇರಿಗಳಿಗೆ ನಿಯೋಜನೆಗೊಂಡಿರುವ ಪ್ರ.ದ.ಸ/ಪ್ರ.ದ.ಕಂ.ನೀ, ದ್ವಿ.ದ.ಸ. ಗ್ರಾಮ ಆಡಳಿತ ಅಧಿಕಾರಿ ವೃಂದದ ಸಿಬ್ಬಂದಿಗಳ ನಿಯೋಜನೆ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಉಲ್ಲೇಖಿತ (2)ರಡಿ ರದ್ದುಪಡಿಸಿ ಅದೇಶಿಸಿದ್ದು ಇರುತ್ತದೆ.
ಸದರಿ ಆದೇಶದನ್ವಯ ನಿಮ್ಮನ್ನು ಅಹಾರ ನಿರೀಕ್ಷರ ಶಹರ ವಲಯ ಗದಗ ಹುದ್ದೆಯಿಂದ ತಹಶೀಲದಾರ ಕಛೇರಿ ಗದಗ ಇಲ್ಲಿಗೆ ಹಾಜರಾಗಲೂ ತಿಳಿಸಲಾಗಿರುತ್ತದೆ ಆದರೆ ನೀವು ಈವರೆಗೂ ನಿಯೋಜಿತ ಕಛೇರಿಯಿಂದ ಬಿಡುಗಡೆಗೊಂಡು ಮೂಲ ಸ್ಥಳಕ್ಕೆ ಕರ್ತವ್ಯಕ್ಕೆ ಹಾಜರಾಗಿರುವದಿಲ್ಲ ಸದರಿ ನಿಯೋಜಿತ ಕಛೇರಿಯಲ್ಲಿ ನಿಯಮಬಾಹಿರವಾಗಿ ಮುಂದುವರದಿರುತ್ತೀರಿ.
ನೀವು ಒಬ್ಬ ಜವಾಬ್ದಾರಿಯುತ ಸರ್ಕಾರಿ ನೌಕರರಾಗಿ ನಿಮ್ಮ ನೇಮಕಾತಿ ಪ್ರಾಧಿಕಾರಿಯವರ ಆದೇಶವನ್ನು ಪಾಲಿಸದೇ ಸರ್ಕಾರಿ ನೌಕರನಿಗೆ ಸಲ್ಲದ ರೀತಿಯಲ್ಲಿ ನಡೆದುಕೊಂಡು ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು 2021 ರ 3 ನೇ ನಿಯಮದ ಉಪನಿಯಮ (1) (2) (3) ನೇ ಖಂಡಗಳನ್ನು ಉಲ್ಲಂಘಿಸಿರುತ್ತಿರಿ. ಕಾರಣ ನಿಮ್ಮ ಮೇಲೆ ಸಿ.ಸಿ.ಎ ನಿಯಮಾವಳಿಗಳ ಪ್ರಕಾರ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂಬ ಬಗ್ಗೆ ಈ ನೋಟೀಸು ಮುಟ್ಟಿದ 24 ಗಂಟೆಯೊಳಗಾಗಿ ನಿಮ್ಮ ಲಿಖಿತ ಹೇಳಿಕೆಯನ್ನು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ನಿಮ್ಮ ಹೇಳಿಕೆ ಏನು ಇರುವುದಿಲ್ಲ ಅಂತಾ ಪರಿಗಣಿಸಿ ನಿಯಮಾನುಸಾರ ಮುಂದಿನ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ನೋಟಿಸು ನೀಡಿದ್ದಾರೆ.

