ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ತುಂಗಭದ್ರಾ ನದಿ ದಡದಲ್ಲಿರುವ ಮದಲಘಟ್ಟ ಆಂಜನೇಯ ದೇವಸ್ಥಾನಕ್ಕೆ ಬಂದ ಶಿರಹಟ್ಟಿ ಪಟ್ಟಣದ 5 ಭಕ್ತರ ಪೈಕಿ ಮೂವರು ನೀರು ಪಾಲಾದ ಘಟನೆ ಶನಿವಾರ ನಡೆದಿದೆ.
ಶರಣಪ್ಪ ಬಡಿಗೇರ ಎಂಬುವವನ ಹುಟ್ಟು ಹಬ್ಬದ ಆಚರಣೆಗೊಸ್ಕರ ಆಂಜನೇಯನ ದೇವರ ದರ್ಶನಕ್ಕೆ 5 ಜನ ಸ್ನೇಹಿತರು ಬಂದಿದ್ದರು ದರ್ಶನಕ್ಕೂ ಮುನ್ನ ತುಂಗಭದ್ರಾ ನದಿ ಸ್ನಾನಕ್ಕೆ ಮುಂದಾಗಿದ್ದ ಸ್ನೇಹಿತರು ಈ ವೇಳೆ ಈಜು ಬಾರದೆ 3 ಜನ ನೀರಲ್ಲಿ ಮುಳುಗಿದ್ದಾರೆ.
ಗುರುನಾಥ ಬಡಿಗೇರ (42), ಮಹೇಶ್ ಬಡಿಗೇರ (26), ಶರಣಪ್ಪ ಬಡಿಗೇರ (30) ನೀರುಪಾಲುಗಿದ್ದು ರವಿ ಹಾಗೂ ವಿರೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಮೂವರಿಗಾಗಿ ಶೋಧ ಕಾರ್ಯ ಕೈಗೊಂಡಿದ್ದು ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿದ್ದು ಶೋಧ ಕಾರ್ಯ ನಡೆಸಿದ್ದಾರೆ ಮುಂಡರಗಿ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
