ಗದಗ: ಸದಾಜನ ಪರ ಅಹಿಂದ ಪರ ಅಹಿಂದ ನಾಯಕ ಎನ್ನುವ ರಾಜ್ಯದ ಮುಖ್ಯ ಮಂತ್ರಿ ಹಣಕಾಸು ಸಚಿವರಾದ ಸಿದ್ದರಾಮಯ್ಯನವರು 2025-26 ನೇ ಸಾಲಿನ ಮಂಡಿಸಿದ ಬಜೆಟ್ ಯಾವುದೇ ದೂರ ದೃಷ್ಟಿ ಇಲ್ಲದ ಅಲ್ಪಸಂಖ್ಯಾತ ಸಮುದಾಯದ ಓಲೈಕೆ ಬಜೆಟ್ ಇದಾಗಿದ್ದು ಜೊತೆಗೆ ಅಹಿಂದ ವರ್ಗಕ್ಕೆ ಅನ್ಯಾಯದ ಬಜೆಟ್ ಆಗಿದೆ ಎಂದು ಬಿಜೆಪಿ ಯುವ ನಾಯಕ ವಸಂತ ಪಡಗದ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ಐತಿಹಾಸಿಕವಾಗಿ 16 ನೇ ಬಾರಿ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ 4 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಬಜೆಟ ಮಂಡಿಸಿದ್ದು ಈ ರಾಜ್ಯದ ಹೆಮ್ಮೆಯ ವಿಷಯವಾಗಿದ್ದು ಆದರೆ 2025-26 ನೇ ಸಾಲಿನ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಓಲೈಕೆಗೆ ವಿವಿಧ ಯೋಜನೆ ಘೋಷಣೆ ಜೊತೆಗೆ ಗುತ್ತಿಗೆ ಕಾಮಗಾರಿಯಲ್ಲೂ 4% ಮೀಸಲು ನೀಡಿದ್ದು ಇದರಿಂದ ಸಾಮಾನ್ಯ ವರ್ಗದವರನ್ನು ಕಡೆಗಣಿಸಿದ್ದಾರೆ.
ಉತ್ತರ ಕರ್ನಾಟಕ ನೀರಾವರಿ ಯೋಜನೆಗಳಲ್ಲಿ ಒಂದಾದ ಕಳಸಾ-ಬಂಡೂರಿಗೆ ಕಳೆದ ಬಿಜೆಪಿ ಸರ್ಕಾರ ಸಾವಿರ ಕೋಟಿ ರೂ ಮೀಸಲು ಇಟ್ಟಿದ್ದರು ಈ ಬಜೆಟನಲ್ಲಿ ಬಿಡಿಕಾಸು ಇಟ್ಟಿಲ್ಲ ಜೊತೆಗೆ ಗದಗ ಜಿಲ್ಲೆಗೆ ಯಾವುದೇ ವಿಶೇಷ ಅನುದಾನ ಕೈಗಾರಿಕಾ ಬೆಳವಣಿಗೆ ಕಪ್ಪತಗುಡ ಜೌಷಧಿಯ ಸಂಪನ್ಮೂಲ,ಗದಗ-ಬೆಟಗೇರಿ ಅವಳಿ ನಗರದ ಕುಡಿಯುವ ನೀರಿನ ಯೋಜನೆ ಕುರಿತು ಶಾಶ್ವತ ಪರಿಹಾರ, ರಿಂಗ್ ರಸ್ತೆ ಪೂರ್ಣಗೊಳಿಸಲು ವಿಶೇಷ ಅನುದಾನ ಗದಗ- ಲಕ್ಷ್ಮೇಶ್ವರ,ಗದಗ-ರೋಣ, ರಸ್ತೆ ಕೆಶಿಪ ಅಡಿಯಲ್ಲಿ ರಾಜ್ಯ ಹೆದ್ದಾರಿಯಾಗಿ ನಿರ್ಮಾಣ ವಸತಿ ಮನೆಗಳ ನಿರ್ಮಾಣ ಸೇರಿದಂತೆ ನೂರಾರು ಯೋಜನೆಗಳ ಕುರಿತು ಈ ಬಾರಿ ಮಂಡಿಸಿದ ಬಜೆಟನಲ್ಲಿ ಗದಗ ಜಿಲ್ಲೆಗೆ ಅತಿ ಹೆಚ್ಚು ಅನ್ಯಾಯವಾಗಿದೆ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಯಾವುದೇ ಅಭಿವೃದ್ಧಿ ಯೋಜನೆ ಇಲ್ಲದೇ ಗ್ಯಾಂರಟಿ ಯೋಜನೆ ಹಣ ಹೊಂದಿಸಲು ಆಗದೇ ಎಲ್ಲ ಸಮುದಾಯದ ಸರ್ವತೋಮುಖ ಪ್ರಗತಿ ನೋಡದೆ ಒಂದು ಸಮುದಾಯದ ಓಲೈಕೆಯ ಬಜೆಟ್ ಇದಾಗಿದೆ.
