ಟೈಟ್ ಸೆಕ್ಯೂರಿಟಿ ನಡುವೆಯೂ ಅವಳಿ ನಗರದಲ್ಲಿ ಅಂಗಡಿಗಳ ಸರಣಿ ಕಳ್ಳತನ

graochandan1@gmail.com
1 Min Read

ಗದಗ: ನಗರದಲ್ಲಿ ರವಿವಾರ ತಡರಾತ್ರಿ ಅಂಗಡಿಗಳ ಸರಣಿ ಅಂಗಡಿಗಳ ಕಳ್ಳತನವಾಗಿದ್ದು ಕೆಸಿ ರಾಣಿ ರಸ್ತೆಯಲ್ಲಿರುವ 3 ಅಂಗಡಿಗಳಲ್ಲಿ ಕಳ್ಳತನ, 4 ಅಂಗಡಿಗಳ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ.

ಅವಳಿ ನಗರದಲ್ಲಿ ಕಳೆದ ಎರಡು ತಿಂಗಳಿಂದ ರಾತ್ರಿ ಟೈಟ್ ಸೆಕ್ಯೂರಿಟಿ ಇದ್ದು ಅದರ ನಡಪವೆಯೂ ಕಳ್ಳರು ಒಂದಲ್ಲಾ ಎರಡಲ್ಲಾ ಒಮದೇ ರಾತ್ರಿಯಲ್ಲಿ 7 ಅಂಗಡಿಗಳ ಕಳ್ಳತನ ಮಾಡಿದ್ದು ಅದರಲ್ಲಿ 3 ಅಂಗಡಿಗಳಲ್ಲಿ ಕಳ್ಳತನ ಮಾಡಿ ಹಣ ತೆಗೆದುಕೊಂಡು ಹೋಗಿದ್ದ ಇನ್ನೂ 4 ಅಂಗಡಿಗಳಲ್ಲಿ ಕಳ್ಳತನ ಮಾಡುವಲ್ಲಿ ವಿಫಲಗೊಂಡಿದ್ದಾರೆ.

ಕಾಮತ್ ಕಿರಾಣಿ, ಬಸವ ಜೌಷಧ ಅಂಗಡಿ, ಆನಂದ ಐಸ್ ಪ್ಯಾಲೇಸ್ ನಲ್ಲಿ ಹಣ ದೋಚಿ ಪರಾರಿಯಾಗಿದ್ದು ಇನ್ನೂ ಅಮೃತ್ ಕಿರಾಣಿ ಮತ್ತು ವೀರಭದ್ರೇಶ್ವರ ಕಿರಾಣಿ ಅಂಗಡಿ, ಮೊಬೈಲ್ ಅಂಗಡಿ, ಪಾನ್ ಶಾಪ್ ಕಳ್ಳತನಕ್ಕೆ ವಿಫಲ ಯತ್ನಗಳಾಗಿದೆ.

ಕಬ್ಬಿಣ್ಣದ ಆಯುಧದಿಂದ ಶಟರ್ ಬೆಂಡ್ ಮಾಡಿ ಶಟರ್ ಓಪನ್ ಮಾಡಿದ್ದಾರೆ ಖದೀಮರು ಶಂಕಿತ ಕಳ್ಳರ ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪೋಲಿಸರು ಕಳ್ಳರ ಹುಡುಕಾಟದಲ್ಲಿ ನಿರತರಾಗಿದ್ದಾರೆ.

- Advertisement -
Ad image

ಸುದ್ದಿ ತಿಳಿದು ಸ್ಥಳಕ್ಕೆ ಬೆಟಗೇರಿ ಬಡಾವಣೆ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Share this Article