ಬಡ್ಡಿ ಯಲ್ಲಪ್ಪನ ಮನೆಯಲ್ಲಿ 4,90,98,625 ಹಣ ಪತ್ತೆ: ಕಂತೆ ಕಂತೆ ಹಣ ನೋಡಿ ಪೋಲಿಸರೆ ಸುಸ್ತು

graochandan1@gmail.com
3 Min Read

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಪೋಲಿಸರು ಅಕ್ರಮ ಬಡ್ಡಿದಂದೆಕೋರರ ಮೇಲೆ ದಾಳಿ ನಡೆಸಿದ್ದು ಕಳೆದು ವಾರವಷ್ಟೇ 26 ಲಕ್ಷ ಹಣ ದೊಂದಿಗೆ ಬಡ್ಡಿ ಮಾಫಿಯಾದ ಕುಳಗಳ ಜಾಲಕ್ಕೆ ಕೈಹಾಕಿದ ಪೋಲಿಸರು ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಡ್ಡಿ ದಂಧೆ ಮಾಡುವವರ ವಿರುದ್ಧ ಸಮರ ಸಾರಿದ್ದರು ಅದರ ಮುಂದುವರೆದ ಭಾಗವಾಗಿ ಮಂಗಳವಾರ

ಬೆಟಗೇರಿ ಠಾಣಾ ವ್ಯಾಪ್ತಿಯಲ್ಲಿರುವ ಬಹು ದೊಡ್ಡ ಬಡ್ಡಿ ದಂದೆಕೋರ ಯಲ್ಲಪ್ಪ ಮಿಸ್ಕಿನ ಮನೆಗೆ ಅವರಗೆ ಸಂಬಂಧಿಸಿದ 13 ಕ್ಕೂ ಹೆಚ್ಚಿನ ಕಡೆಯಲ್ಲಿ ಪೋಲಿಸರು ಭರ್ಜರಿ ದಾಳಿ ನಡೆಸಿದ್ದು ದಾಳಿಯಲ್ಲಿ ಪೋಲಿಸರು ಯಲ್ಲಪ್ಪ ಮನೆಯಲ್ಲಿ ಸಿಕ್ಕ ಹಣ, ಬಂಗಾರ,ಖಾಲಿಚೆಕ್ಕು,ಬಾಂಡ್ ಪೇಪರ ನೋಡಿ ಸುಸ್ತಾಗಿದ್ದಾರೆ.

ಯಲ್ಲಪ್ಪ ಮಿಸ್ಕಿನ ಬಡ್ಡಿ ದಂದೆಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದರು ಬಡ್ಡಿಗೆ ಬಡ್ಡಿ ಮೀಟರ್ ಬಡ್ಡಿ ಹಾಕಿ ಜನರಿಂದ ಬಡ್ಡಿಗಾಗಿ ರಕ್ತ ಹೀರುತ್ತಿದ್ದ ಭೂಪನಾಗಿದ್ದ ಕಂಡೋರ ಆಸ್ತಿಯಲ್ಲಾ ನಂದೆ ಎಂಬಂತೆ ಅಮಾಯಕರಿಗೆ ಸಾಲ ನೀಡಿ ಅವರ ಆಸ್ತಿಗಳಿಗೆ ವಾರಸುದಾರನಾಗುತ್ತಿದ್ದ ಇವನ ಮೇಲಿರೋ ಆರೋಪಗಳನ್ನು ಕೇಳಿ ಕೇಳಿ ಸುಸ್ತಾದ ಪೋಲಿಸರು ಮಂಗಳವಾರ ದಾಳಿ ಮಾಡಿ ಬುಧವಾರದ ವರೆಗೆ ಕೋಟಿ ಕೋಟಿ ಅಕ್ರಮ ಹಣವನ್ನು ಜಪ್ತಿಮಾಡಿ ಯಲ್ಲಪ್ಪ ಹಾಗೂ ಆತನ ಸಹಚರರಿಗೆ ತಕ್ಕ ಸಾಷ್ಟಿ ಮಾಡಿದ್ದಾರೆ.

ಗರಿ ಗರಿ ಹಣ ನೋಡಿ ಪೋಲಿಸರೆ ಬೆರಗು:

- Advertisement -
Ad image

ಯಲ್ಲಪ್ಪನ ಮನೆಯಲ್ಲಿ 500,200 ಮಖ ಬೆಲೆಯುಳ್ಳ ಕಂತೆ ಕಂತಿನ ಗರಿ ಗರಿ ನೋಟ ಪತ್ತೆಯಾಗಿದ್ದು ಅಲ್ಲದೆ
ಗೋಣಿ ಚೀಲ,ಹಿಟ್ಟಿನ ಡಬ್ಬಿಯಲ್ಲಿಯೂ ಹಣ ಸಿಕ್ಕಿದೆ ಜೊತೆಗೆ ಜನರಿಂದ ಭದ್ರತೆಗಾಗಿ ತೆಗೆದುಕೊಂಡ ಖಾಲಿ ಬಾಂಡ್ ಪೇಪರ್ಸ,ಖಾಲಿ ಚೆಕ್ ಗಳು ಪತ್ತೆಯಾಗಿವೆ ಎರಡು ದಿನದಿಂದ ಹಣ ಎಣಿಸುವ ಮಷಿನಗಳೊಂದಿಗೆ ಪೋಲಿಸರು ಯಲ್ಲಪ್ಪ ಅಕ್ರಮ ಬಡ್ಡಿ ದಂದೆಯ ಕರಾಳ ಮುಖವನ್ನು ಬಯಲುಮಾಡಿದ್ದಾರೆ.

ಅಸೋಕ ಗಣಾಚಾರಿಯಿಂದ ಯಲ್ಲಪ್ಪನ ವಿರುದ್ಧ ದೂರು:

ಬೆಟಗೇರಿ ನಿವಾಸಿಯಾದ ಅಶೋಕ ಭೋಜಪ್ಪ ಗಣಾಚಾರಿ ಎಂಬುವವರು ಯಲ್ಲಪ್ಪ ಮಿಸ್ಕಿನ ವಿರುದ್ದ ದೂರು ನೀಡಿದ್ದು 2016 ರಲ್ಲಿ ಆರೋಪಿತ ಯಲ್ಲಪ್ಪ ತೃಜುಸಾ ಮಿಸ್ಕಿನ್ ಅವರಿಂದ 1 ಕೋಟಿ 93 ಲಕ್ಷ ಹಣ ಕೈಗಡ ಸಾಲ ಪಡೆದಿದ್ದರು ಅಂದಿನಿಂದ ಈ ವರೆಗೂ 1.40 ಕೋಟಿ ಹಣ ಮರುಪಾವತಿ ಮಾಡಿದ್ದೇನೆ ಜೊತೆಗೆ ಬೆಟಗೇರಿಯ ಸರಸ್ವತಿ ಕಲ್ಯಾಣ ಮಂಟಪವನ್ನು ಯಲ್ಲಪ್ಪನ ಹೆಸರಿಗೆ ನೊಂದಾಯಿಸಿಕೊಂಡಿದ್ದಾನೆ ಇದಲ್ಲದೆ ಇತರ ಆಸ್ತಿಗಳಿಗೂ ಸಂಚಗಾರ ಕಾಗದ ಮಾಡಿಸಿದ್ದು ಇದಲ್ಲದೆ ನನ್ನ ಕುಟುಂಬದ ಸದಸ್ಯರ ಖಾಲಿ ಚೆಕ್ಕ ಬಾಂಡ ಗಳಿದ್ದು ಅವುಗಳ ಬಗ್ಗೆ ಹೆದರಿಸಿ ಬೆದರಿಸಿ ಅವರ ಸಹಚರರ ಮೂಲಕ ಆಸ್ತಿಗಳನ್ನು ಯಲ್ಲಪ್ಪ ಮಿಸ್ಕಿನ ಹಾಗೂ ಸಹಚರರು ನನಗೆ ಇನ್ನೂ ಹಣಕ್ಕಾಗಿ ಪೀಡಿಸುತ್ತಿದ್ದಾಗಿ ಅಶೋಕ ಗಣಾಚಾರಿ ದೂರು ನೀಡಿದ್ದರು.

ಯಲ್ಲಪ್ಪ ಮಿಸ್ಕಿನ್ ಸೇರಿದಂತೆ ಹಲವರ ಮೇಲೆ ಎಫ್ ಐಆರ್ ದಾಖಲು :

ಯಲ್ಲಪ್ಪ ತೇಜುನಾ ಮಿಸ್ಕಿನ್, ವಿಕಾಸ ಮಿಸ್ಕಿನ್, ಮಂಜು ಶ್ಯಾವಿ, ಈರಣ್ಣ, ಮೋಹನ ಎಂಬುವರ ಮೇಲೆ ಎಪ್ ಐ ಆರ್ ದಾಖಲಿಸಲಾಗಿದೆ ಎಂದು ಬಿ.ಎಸ್. ನೇಮಗೌಡ ತಿಳಿಸಿದ್ದಾರೆ.

 

ಕೋಟಿ ಕೋಟಿ ಹಣ,ಬಂಗಾರ, ಖಾಲಿಬಾಂಡ್,ಚೆಕ್ ಪತ್ತೆ:

ಬೆಟಗೇರಿಯ ಬಡ್ಡಿ ಬಕಾಸುರನ ಮನೆಯಲ್ಲಿ ಕೋಟ್ಯಾಂತರ ಹಣದ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾಹಿತಿ ನೀಡಿದ ಗದಗ‌ ಎಸ್ಪಿ ಬಿ.ಎಸ್.ನೇಮಗೌಡ ಮಾತನಾಡಿ ಒಟ್ಟು 4 ಕೋಟಿ 90 ಲಕ್ಷದ 98 ಸಾವಿರ ರೂ.ಹಣ ಗಳನ್ನ ಜಪ್ತಿ ಮಾಡಲಾಗಿದೆ. ಪ್ರಕರಣದ ಮುಖ್ಯ ಆರೋಪಿ ಯಲ್ಲಪ್ಪ ಮಿಸ್ಕಿನ್, ಸೇರಿದಂತೆ ಐದು ಜನರನ್ನ ವಶಕ್ಕೆ ಪಡೆದಿದ್ದು, ಅವರಿಂದ 992 ಗ್ರಾಂ ಚಿನ್ನ,650 ಬಾಂಡ್, 04 ಬ್ಯಾಂಕ್ ಎಟಿಎಂ, 09 ಬ್ಯಾಂಕ್ ಪಾಸ್ ಬುಕ್,02 ಎಲ್ ಐ ಸಿ, ಬಾಂಡ್ ಹಾಗೂ ಅಕ್ರಮವಾಗಿ ಸಂಗ್ರಹಣೆ ಮಾಡಿದ 65 ಲೀಟರ್‌ ಮದ್ಯದ ಬಾಟಲಿಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ಪೋಲಿಸರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ:

ಕಳೆದ ಒಂದು ವಾರದಿಂದ ಬಡ್ಡಿ ದಂದೆಕೋರರ ಮೇಲೆ ನಡೆಯುತ್ತಿರುವ ದಾಳಿಗೆ ಸಾರ್ವಜನಿಕರು ಎಸ್ಪಿ ಬಿ ಎಸ್ ನೇಮಗೌಡ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಎಸ್ಪಿ ಎಂ ಬಿ ಸಂಕದ,ಮಹಾಂತೇಶ ಸಜ್ಜನ ಡಿ ಎಸ್ ಪಿ, ಸಿಇಎನ್, ಪಿಎಸ್ ಜೆ ಹೆಚ್ ಇನಮಾದಾರ,ಡಿ ಎಸ್ ಪಿ ಗದಗ, ಪಿಐ ಸಂಗಮೇಶ ಶಿವಯೋಗಿ,ಧೀರಜ್ ಶಿಂಧೆ ಸಿಪಿಐ,ಸಿದ್ರಾಮೇಶ್ವರ ಗಡದ ಪಿಐ,ಎಲ್ ಎಮ್ ಆರಿ ಪಿಎಸ್ಐ,
ಪಿಎಸ್ಐ ಗಳಾದ ಆರ್ ಸಿ ದೊಡ್ಡಮನಿ ಪಿಎಸ್ಐ,ನಾಗರಾಜ ಗಡದ,ಚನ್ನಯ್ಯ ಬೇವೂರ,ಎಲ್ ಕೆ ಜೂಲಿಕಟ್ಟಿ,ಮಾರುತಿ ಜೊಂಗದಂಡಕರ,ಸೂಮನಗೌಡ ಗೌಡರ,ಶಂಕುಂತಲಾ ನಾಯಕ,ಐಶ್ವರ್ಯ ನಾಗರಾಳ,ಗೀರಿಶ ಎಂ, ಸೇರಿದಂತೆ ಪೋಲಿಸ ಸಿಬ್ಬಂದಿಗಳು ಹಾಜರಿದ್ದರು.

Share this Article