ಗದಗ: ನಗರದ ಮಣಿಕಂಠ ಸನ್ನಿಧಾನದ ಸೇವಾ ಸಮಿತಿ ವತಿಯಿಂದ 30 ನೇ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯನ್ನು ಜನವರಿ 6 ಸೋಮವಾರದಂದು ಸಾವಿರಾರು ಭಕ್ತ ಸಮೂಹದ ಮಧ್ಯೆ ವಿಜೃಂಭಣೆಯಿಂದ ಜರಗಿತು.
ಮಹಾಪೂಜೆಯ ಅಂಗವಾಗಿ ಮಧ್ಯಾಹ್ನ ಅನ್ನ ಸಂತರ್ಪಣೆ ಹಾಗೂ ಸಾಯಂಕಾಲ ಸನ್ನಿಧಾನದ ಹಿರಿಯ ಗುರುಸ್ವಾಮಿಗಳಾದ ವಿರೂಪಾಕ್ಷ ಪೋಲಿಸ್ ಪಾಟೀಲ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿಗೆ ಪಂಚಾಮೃತ ಅಭಿಷೇಕ 18 ಕುಂಬಗಳಿಗೆ ಕುಂಬ ಪೂಜೆ ಅಯ್ಯಪ್ಪ ಸ್ವಾಮಿಯ ಭಜನೆ, ನಡೆಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ನಾಗರಾಜ ಬಾಗಲಕೋಟ ಗುರುಸ್ವಾಮಿಗಳು ಮಣಿಕಂಠ ಸನ್ನಿಧಾನದಲ್ಲಿ ಪ್ರತಿ ಶನಿವಾರ ಅಯ್ಯಪ್ಪ ಸ್ವಾಮಿಗೆ ಪೂಜೆ ಅಭಿಷೇಕ ಹಾಗೂ ಅನ್ನ ಪ್ರಸಾದದ ಜೊತೆಗೆ ಸತ್ಸಂಗ ಕಾರ್ಯಕ್ರಮ ಇರುತ್ತದೆ ಕಾರಣ ಎಲ್ಲ ಅಯ್ಯಪ್ಪ ಭಕ್ತರು ಪ್ರತಿ ಶನಿವಾರ ಆಗಮಿಸಿ ಸ್ವಾಮಿಯ ಆಶೀರ್ವಾದ ಪಡೆಯಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಆನಂದ ಕಂಬಳಿ ಗುರುಸ್ವಾಮಿಗಳು,ಶಿವಾನಂದ ಗುರುಸ್ವಾಮಿಗಳು ಸೇರಿದಂತೆ ನೂರಾರು ಅಯ್ಯಪ್ಪ ಮಾಲಾಧಾರಿ ಸ್ವಾಮಿಗಳು ಹಾಗೂ ಅಯ್ಯಪ್ಪ ಭಕ್ತರು ಉಪಸ್ಥಿತರಿದ್ದರು.