ಗದಗ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಹಣದಲ್ಲಿ ಅತ್ತೆ-ಸೊಸೆ ಇಬ್ಬರೂ ಕೂಡಿಕೊಂಡು ಸರ್ಕಾರ ಪ್ರತಿ ತಿಂಗಳು ನೀಡಿದ 2000 ರೂ ಹಣ ಕೂಡಿಟ್ಟು ತಮ್ಮ ಜಮೀನಿನಲ್ಲಿ ಬೋರವೆಲ್ಲ್ ಹಾಕಿಸಿಕೊಳ್ಳುವ ಮೂಲಕ ಕಾಂಗ್ರೆ ಸರ್ಕಾರ ಪಂಚ ಗ್ಯಾರಂಟಿ ಗೃಹಲ್ಷ್ಮೀ ಯೋಜನೆಯ ಹಣವನ್ನು ಸದುಪಯೋಗಮಾಡಿಕೊಂಡಿದ್ದಾರೆ.
ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ನಿವಾಸಿಗಳಾದ ಅತ್ತೆ ಮಾಬುಬೀ ಮಾಲಧಾರ್, ಸೊಸೆ ರೋಷನ್ ಬೇಗಂ ಮಾಲಧಾರ್ ಕೂಡಿಕೊಂಡು, ಗೃಹ ಲಕ್ಷೀ ಯೋಜನೆಯ ಪ್ರತಿ ತಿಂಗಳ ಬರುವ ದುಡ್ಡನ್ನು ಕೂಡಿಟ್ಟು ತಮ್ಮ ಜಮೀನಿನಲ್ಲಿ ಬೋರ್ ವೆಲ್ ಹಾಕಿಸಿದ್ದಾರೆ.
ಗೃಹಲಕ್ಷ್ಮೀ ಹಣ ₹44 ಸಾವಿರ ರೂ ಕೂಡಿಟ್ಟು ತಮ್ಮ ಜಮೀನಿನಲ್ಲಿ ಬೋರ್ ವೆಲ್ ಹಾಕಿಸಿದ್ದಾರೆ ಒಟ್ಟು ₹60 ಸಾವಿರ ರೂ ಬೋರವೇಲ್ ಗೆ ಖರ್ಚು ಮಾಡಿದೇದು ಅದರಲ್ಲಿ ಅತ್ತೆ-ಸೊಸೆ ಗೃಹಲಕ್ಷ್ಮೀ ಯೋಜನೆಯ 44 ಸಾವಿರ ಹಣವನ್ನು, ಬೋರ್ ವೆಲ್ ಖರ್ಚಿಗೆ ತಮ್ಮ ಮಗನ ಕೈಗೆ ಹಣ ನೀಡಿ ಬೋರ ವೆಲ್ ಕೊರೆಸಲು ಸಹಕಾರಿಯಾಗಿದ್ದಾರೆ.
ಉಳಿದ ಹಣವನ್ನು ಇವರ ಮಗ ಜೋಡಿಸಿ ಬೋರ್ ವೆಲ್ ಖರ್ಚಿನ ಪೂರ್ಣ ಮೊತ್ತವನ್ನ ಕೊಟ್ಟಿದ್ದಾರೆ.
ತಮ್ಮ 3 ಎಕರೆ ಜಮೀನಿನಲ್ಲಿ ಈ ಬೋರ್ ವೆಲ್ ಕೊರಿಸಿದ್ದು, ಒಂದೂವರೆ ಇಂಚಿಗೆ ಕೊಳವೆಬಾವಿಯಲ್ಲಿ ನೀರು ಉಕ್ಕಿದೆ. ಇದರಿಂದ ಹರ್ಷಗೊಂಡ ಕುಟುಂಬ, ಸಿದ್ದರಾಮಯ್ಯ ಅವರು ನೀಡಿದ ಗೃಹ ಲಕ್ಷೀ ಯೋಜನೆ ತುಂಬಾನೆ ಅನುಕೂಲವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.