ಜಿ.ಪಂ ಪಿಆರ್ ಇಡಿ ವಿಭಾಗದ ಎಸ್ ಡಿ ಎ ಲಕ್ಷ್ಮಣ ಕರ್ಣಿ ಮನೆ ಮೇಲೆ ಲೋಕಾ ದಾಳಿ

graochandan1@gmail.com
1 Min Read

ಗದಗ:ಆದಾಯ ಮೀರಿ ಆಸ್ತಿಗಳಿಕೆ ದೂರಿನ ಮೇರೆಗೆ ಇಂದು ಕರ್ನಾಟಕ ರಾಜ್ಯದ 10 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಗದಗ ಜಿಲ್ಲಾ ಪಂಚಾಯ ಇಂಜನೀಯರಿಂಗ ವಿಭಾಗ ದ್ವಿತೀಯ ದರ್ಜೆ ಸಹಾಯಕ ಲಕ್ಷ್ಮಣ ಕರ್ಣಿ ಮನೆ ಮೇಲೆ ಬೆಳಂ ಬೆಳಿಗ್ಗೆ ನಗರದ ರಾಧಾಕೃಷ್ಣ ಬಡಾವಣೆಯಲ್ಲಿ ಇರುವ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಮನೆ ಸೇರಿದಂತೆ ಗದಗ, ಹಾವೇರಿ ಗಜೇಂದ್ರಗಡದ ಸೇರಿದಂತೆ 5 ಕಡೆಗಳಲ್ಲಿ ಲಕ್ಷ್ಮಣ ಕರ್ಣಿ ಗೆ ಸಂಬಂಧಿಸಿದ ಆಸ್ತಿಗಳನ್ನು ಪರಿಶೀಲನೆ ನಡೆಸಿದ್ದಾರೆ.

ಲೋಕಾಯುಕ್ತ ಎಸ್ಪಿ ಹನುಮಂತ ರಾಯ್ ಮತ್ತು ಡಿಎಸ್ಪಿ ವಿಜಯ್ ಬಿರಾದಾರ್ ನೇತೃತ್ವದಲ್ಲಿ ದಾಳಿ ನಡೆದಿದೆ ಪಿ ಎಸ್ ಐ ಎಸ್ ಎಸ್ ಎಸ್ ತೇಲಿ, ಪಿ ಜಿ ಕಟಗಿ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.

Share this Article