ಗದಗ: ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಗದಗ ಜಿಲ್ಲಾ ಘಟಕದ ವತಿಯಿಂದ ನಗರದ ಬುಳ್ಳಾನವರ ತೋಟ ಭಾರತ ವೇರ್ ಹೌಸ ನಲ್ಲಿರುವ ಮಣಿಕಂಠ ಸನ್ನಿಧಾನದಲ್ಲಿ ರವಿವಾರ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ವತಿಯಿಂದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಸಾಸ್ ಐಡಿ ಕಾರ್ಡ ನೀಡಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಸಾಸ್ ನ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ನಾಗರಾಜ ಬಾಗಲಕೋಟ ಮಾತನಾಡಿ ಸಾಸ್ ಸದಸ್ಯರಾಗುವುದರ ಪ್ರಯೋಜನ ಗದಗ ಜಿಲ್ಲಾ ಸಾಸ್ ವತಿಯಿಂದ ಕಳೆದ ಎಳು ವರ್ಷಗಳಿಂದ ಸಾಸ್ ವತಿಯಿಂದ ನಡೆದ ವಿವಿಧ ಕಾರ್ಯಕ್ರಮಗಳನ್ನು ಹಾಗೂ ಸಾಸ್ ನ ಸಾಧನೆಗಳನ್ನು ಹೇಳಿದರು.
ಮಾಲಾಧಾರ ಸ್ವಾಮಿಗಳಾದ ಬಸವರಾಜ ಕದಡಿ,ವಿಜಯ ಕನಕಿ,
ನಾರಾಯಣ ಕನಕಿ,ವಿಕ್ರಂ ಶಿರಹಟ್ಟಿ, ವಿನಾಯಕ ಭಾಸ್ಮೆ ಸೇರಿದಂತೆ ಅನೇಕರಿಗೆ ಸಾಸ್ ಸೇವಾ ಕಾರ್ಡ ವಿತರಣೆ ಮಾಡಲಾಯಿತು.
ಇದೆ ಸಮಯದಲ್ಲಿ ಗದಗ ಜಿಲ್ಲಾ ಸಾಸ್ ಗೆ ಆರ್ಥಿಕವಾಗಿ ಸಹಾಯವಾಗುಂತೆ ಗದಗ-ಬೆಟಗೇರಿ ನಗರ ಸಭೆ ವತಿಯಿಂದ 25,000 ರೂಪಾಯಿಗಳ ದೇಣಿಗೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಜಿಲ್ಲಾ ಬಿಜೆಪಿ ಮುಖಂಡ ಹಾಗೂ ಅಯ್ಯಪ್ಪ ಭಕ್ತರಾದ ರಮೇಶ ಸಜ್ಜಗಾರ ಅವರನ್ನು ಜಿಲ್ಲಾ ಸಾಸ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಸಾಸ್ ನ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ನಾಗರಾಜ ಬಾಗಲಕೋಟ, ಜಿಲ್ಲಾ ಅಧ್ಯಕ್ಷರಾದ ವೆಂಕಟೇಶ ದಾಸ್ವಾಲಕೇರಿ, ಉಪಾಧ್ಯಕ್ಷರಾದ ಆನಂದ ಗುರುಸ್ವಾಮಿ,ಕಾರ್ಯದರ್ಶಿ ಮಂಜುನಾಥ ಹಳ್ಳೂರಮಠ, ಆಡಳಿತ ಕಾರ್ಯದರ್ಶಿ ಪ್ರಸಾದ ಕೋಡಿತ್ಕರ್,ಪದಾಧಿಕಾರಿಗಳಾದ ಶಿವಾನಂದ ಶಿಗ್ಲಿ,ವೆಂಕರೆಡ್ಡಿ ಅಜರೆಡ್ಡಿ,ಸುರೇಶ್ ಡಂಬಳ,ಸದಾನಂದ ಕಮ್ಮರ್, ರವಿರಾಜ್ ತಳವಾರ್,ಆನಂದ ಕಂಬಳಿ,ಮಂಜುನಾಥ ಅಚ್ಚಳ್ಳಿ ಸೇರಿದಂತೆ ಸಾಸ್ ನ ಎಲ್ಲಾ ಸೇವಕರು ಅಯ್ಯಪ್ಪ ಮಾಲಾಧಾರಿಗಳು ಹಾಜರಿದ್ದರು.