ಮುಂಡರಗಿ- ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ 17 ನೇ ವಾರ್ಷಿಕೋತ್ಸವ ಅಂಗವಾಗಿ ಡಿ.2 ಮತ್ತು 3 ರಂದು ಜಾತ್ರಾ ಮಹೋತ್ಸವ ನಡೆಯಲಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಸ್ಥಳೀಯ ವೀರಭದ್ರೇಶ್ವರ ಸೇವಾ ಸಮಿತಿ ಅಧ್ಯಕ್ಷ ಸಂಗಪ್ಪ ಲಿಂಬಿಕಾಯಿ ಹೇಳಿದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಾತನಾಡಿದವರು ಡಿ.2 ರಂದು ಬೆಳಗ್ಗೆ 9 ಗಂಟೆಗೆ ನಾಡೋಜ ಡಾ.ಅನ್ನದಾನೇಶ್ವರ ಶಿವಯೋಗಿಗಳಿಂದ ಶ್ರೀ ಭದ್ರಕಾಳಮ್ಮ ದೇವಿಯ ನೂತನ ಗೋಪುರದ ಕಳಸರೋಹಣ ನಡೆಯುವುದು ನಂತರ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಜರುಗಲಿದೆ ಸಂಜೆ 4:30ಕ್ಕೆ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ಜರುಗುವುದು ಎಂದರು.
ಜಾತ್ರಾ ಕಮಿಟಿ ಅಧ್ಯಕ್ಷ ವೀರೇಶ್ ಗೊಗುರಿ ಮಾತನಾಡಿ ಡಿ.3 ರಂದು ಬೆಳಗ್ಗೆ 8:30 ಕ್ಕೆ ಅಗ್ನಿ ಮಹೋತ್ಸವ ಜರಗುವುದು 11:30 ಕ್ಕೆ ಉಚಿತ ಸಾಮೂಹಿಕ ವಿವಾಹಗಳು ನಡೆಯಲಿದೆ ಡಾ.ಅನ್ನದಾನೇಶ್ವರ ಶಿವಯೋಗಿಗಳು ಸಾನಿಧ್ಯ ವಹಿಸುವರು ಲಿಂಗನಾಯಕನಹಳ್ಳಿ ಚನ್ನವೀರ ಸ್ವಾಮೀಜಿ ನೇತೃತ್ವ ವಹಿಸುವರು ಮುಷ್ಟಿಕೊಪ್ಪದ ವೈದ್ಯ ಡಾ.ಜಿ ಬಿ ಬಿಡ್ನಾಳ ಅವರಿಗೆ ವೀರಭದ್ರೇಶ್ವರ ಪ್ರತಿಷ್ಠಾನ ಪುರಸ್ಕಾರ ನೀಡಲಾಗುವುದು ಸಂಗಪ್ಪ ಲಿಂಬಿಕಾಯಿ ಅಧ್ಯಕ್ಷತೆ ವಹಿಸುವವರು ವೀರಭದ್ರೇಶ್ವರ ಮಹಿಳಾ ವೇದಿಕೆ ಅಧ್ಯಕ್ಷ ಗೌರಮ್ಮ ಹುರಕಡ್ಲಿ ಪುರಸಭೆ ಅಧ್ಯಕ್ಷ ನಿರ್ಮಲ ಕೊರ್ಲಹಳ್ಳಿ ಪುರಸಭೆ ಉಪಾಧ್ಯಕ್ಷ ನಾಗೇಶ್ ಹುಬ್ಬಳ್ಳಿ ಸದಸ್ಯರಾದ ಕವಿತಾ ಉಳ್ಳಾಗಡ್ಡಿ ಶಾಂತವ್ವ ಕರಡಿಕೋಳ ಪಾಲ್ಗೊಳ್ಳಲಿದ್ದಾರೆ.
ಸಾಮೂಹಿಕ ವಿವಾಹದಲ್ಲಿ 45 ನವ ಜೋಡಿಗಳು ನೂತನ ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಸಂಜೆ 7 ಗಂಟೆಗೆ ಸಹಸ್ರ ದೀಪೋತ್ಸವ ಕಾರ್ತಿಕ ಮಂಗಲೋತ್ಸವ ನಡೆಯುವುದು ಎಂದು ಮಾಹಿತಿ ನೀಡಿದರು ಈ ವೇಳೆ ಸಾಯಿಪ್ರಸನ್ನ ಅಳಹುಂಡಿ ಅಶೋಕ ಕಮ್ಮಾರ್ ಕೊಟ್ರೇಶ್ ನವ್ಲಿಹಿರೇಮಠ ಈರಣ್ಣ ಕರ್ಜಗಿ ವಿ ಜೆ ಹಿರೇಮಠ ಶಿವಯೋಗಿ ಕೊಪ್ಪಳ ಗೀತಾ ಬಣಗಾರ್ ರೋಹಿಣಿ ಕುಭಸದ ಲತಾ ಲಿಂಬಿಕಾಯಿ ಅಮೃತ ಲಿಂಬಿಕಾಯಿ ಶ್ರೀದೇವಿ ಗೋಡಿ ಲತಾ ಕಡ್ಡಿ ಸಂಗೀತ ಕೊರಡಕೇರಿ ನೇತ್ರ ಹಾಲಗಿ ಕಲ್ಪನಾ ಕಡ್ಡಿ ಪುಷ್ಪ ಬೆಲ್ಲದ ಉಪಸ್ಥಿತರಿದ್ದರು