ಗದಗ: 2024-29 ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ರವಿ ಎಲ್ ಗುಂಜೀಕರ ಮತ್ತು ರಾಜ್ಯ ಪರಿಷತ ಸದಸ್ಯರಾಗಿ ಡಿ ಟಿ ವಾಲ್ಮೀಕಿ ಅವರು ಅವಿರೋಧವಾಗಿ ಗುರುವಾರ ಆಯ್ಕೆಯಾಗಿದ್ದಾರೆ ಆಯ್ಕೆಯಾದ ನೂತನ ಸದಸ್ಯರುಗಳಿಗೆ ನೌಕರ ಭವನದಲ್ಲಿ ಹೂ ಮಾಲೆ ಹಾಕಿ ಸನ್ಮಾನಿಸಿರು ಈ ಸಂಧರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾ ಅಧ್ಯಕ್ಷರಾದ ಅರುಣಗೌಡ ಮಂಟೂರ ಜಿಲ್ಲೆಯಿಂದ ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು ಜೊತೆಗೆ ಕಂದಾಯ ನೌಕರರ ಸಂಘದ ಪದಾಧಿಕಾರಿಗಳಾದ ಬಿ.ಎಸ್ ಕನ್ನೂರ, ಎಸ್ ಎಂ ಹಿರೇಮಠ, ಫಕೀರಗೌಡ ಗೌಡರ, ಜಯ ಪ್ರಕಾಶ ಭಜಂತ್ರಿ,ಆರ್ ವೈ ವಿಕ್ರಮ, ಮಹೇಶ್ ಪೊಲೀಸ್ ಪಾಟೀಲ, ಗಣೇಶ್ ಲಮಾಣಿ, ಶ್ರೀಧರ್ ಪಟ್ಟೇದ, ಅನಿಲ್ ಲೋಂಡೆ,ಅಶೋಕ್ ಕೆಂಚರೆಡ್ಡಿ ಸೇರಿದಂತೆ ಹಲವರು ಹಾಜರಿದ್ದರು.