ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶಾಸಕರಿಂದ ಉದ್ಘಾಟನೆ ಮತ್ತು ಭೂಮಿ ಪೂಜೆ

ಸಮಗ್ರ ಪ್ರಭ ಸುದ್ದಿ
2 Min Read

ಮುಂಡರಗಿ – ಸರ್ಕಾರದಲ್ಲಿ ಅನುದಾನದ ಕೊರತೆಯಿಂದ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಬರುವ ಅನುದಾನದಲ್ಲಿ ಹಂಚಿಕೆ ಮಾಡಿ ಕ್ಷೇತ್ರದ ಅಭಿವೃದ್ಧಿ ಮಾಡಲಾಗಿದೆ ಈಗಾಗಿ ತಾಳ್ಮೆಯಿಂದ ಸಹಕರಿಸಬೇಕು ಎಂದು ಶಾಸಕ ಡಾ ಚಂದ್ರು ಲಮಾಣಿಯವರು ತಿಳಿಸಿದರು.

ಮುಂಡರಗಿ ತಾಲೂಕಿನ ಬಿದರಳ್ಳಿ, ಹಮಿಗಿ, ಕೊರ್ಲಳ್ಳಿ, ಹಾಗೂ ಬ್ಯಾಲವಾಡಗಿ ಗ್ರಾಮಗಳಲ್ಲಿ ಮಂಗಳವಾರ ರಂದು ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿ ಪೂಜೆ ನೆರವೇರಿಸಿ ಶಾಸಕ ಚಂದ್ರು ಲಮಾಣಿ ಮಾತನಾಡಿದರು. ಮುಂಡರಗಿ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿ 33 ಲಕ್ಷ ರೂಪಾಯಿ ವೆಚ್ಚದ ಮೂರು ಶಾಲಾ ಕೊಟ್ಟಡಿಗಳ ಉದ್ಘಾಟನೆ ಹಾಗೂ 10 ಲಕ್ಷ ರೂಪಾಯಿ ವೆಚ್ಚದ ಕೊಠಡಿಗಳ ದುರಸ್ತಿ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದರು.

ನಂತರ ಹಮ್ಮಿಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ನೂತನ ಕೊಠಡಿ ಉದ್ಘಾಟನೆ ಮತ್ತು ಕೊರ್ಲಹಳ್ಳಿ ಗ್ರಾಮದ ಪ್ರಾಥಮಿಕ ಶಾಲಾ ಕೊಠಡಿ ದುರಸ್ತಿ ಕಾಮಗಾರಿ ಹಾಗೂ ನವೋದಯ ಶಾಲೆಗೆ ಪೈಪ್ಲೈನ್ ಸಂಪರ್ಕ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಂಡರಗಿ ಮಂಡಳದ ಅಧ್ಯಕ್ಷ ಹೆಮಗಿರೀಶ ಹಾವಿನಾಳ ಬಿದರಹಳ್ಳಿ ಗ್ರಾಮದ ಬಹುದಿನದ ಬೇಡಿಕೆಯಾದ ರೇಣುಕಾಂಬ ದೇವಿ ದೇವಸ್ಥಾನದ ತಡೆಗೋಡೆ ನಿರ್ಮಾಣ ಕಾಮಗಾರಿಯ ಮಾಡಲು ಶಾಸಕರು ಸರಕಾರಕ್ಕೆ ನಿರಂತರ ಪ್ರಯತ್ನ ಮಾಡುತ್ತಿದ್ದೂ ಮುಂದಿನ ದಿನಗಳಲ್ಲಿ ದೇವಸ್ಥಾನಕ್ಕೆ ತಡೆಗೂಡಗೆ ಪ್ರಾಮಾಣಿಕ ಪ್ರಯತ್ನ ಮಾಡಿರುತ್ತಾರೆ ಶಾಸಕರಿಗೆ ಈ ಸಂದರ್ಭದಲ್ಲಿ ಬಿದರಹಳ್ಳಿ ಗ್ರಾಮಕ್ಕೆ ಬಿಸಿಎಂ ವಸತಿ ನಿಲಯ ಮತ್ತು ಕಾಲೇಜು ನೀಡಬೇಕು ಎಂದು ಗ್ರಾಮಸ್ಥರ ಪರವಾಗಿ  ಮನವಿ ಮಾಡಿಕೊಂಡರು.

ಶಾಸಕ ಚಂದ್ರು ಲಮಾಣಿ ಮಾತನಾಡಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ಯಾವುದೇ ಇಲಾಖೆಯಲ್ಲಿ ಏನೇ ಸಮಸ್ಯೆ ಇದ್ದರೂ ಸಾರ್ವಜನಿಕರು ಮುಂಡರಗಿ ಪಟ್ಟಣದಲ್ಲಿರುವ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಯಾವುದೇ ಸಣ್ಣ ಕೆಲಸವಿದ್ದರೂ ಕೂಡ ನಮಗೆ ತಿಳಿಸಬೇಕು ಸರ್ಕಾರದಲ್ಲಿ ಅನುದಾನದ ಕೊರತೆಯಿಂದ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಹೀಗಾಗಿ ತಾವುಗಳು ಸಹಕಾರ ನೀಡಬೇಕು ಎಂದರು ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ಎಂ ಪಂಡ್ನೇಶಿ. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸುನಿತಾ ಹಾರೋಗೆರೆ. ಮಲ್ಲಿಕಾರ್ಜುನ ಹಣಜಿ. ದಾವಲ್ ಸಾಬ್ ನಮಾಜ್ಜಿ ಮರುತಿ ನಾಗರಹಳ್ಳಿ. ಮುಂತಾದವರು ಉಪಸ್ಥಿತರಿದ್ದರು.

Share this Article