ಗದಗ: ಜಿಲ್ಲೆಯಲ್ಲಿ ಇತ್ತೀಚೆಗೆ ರೋಣ ತಾಲೂಕಿನ ಬೆಳವಣಕಿ ಗ್ರಾಮದಲ್ಲಿ ಗದಗ ನಗರದ ಬಾಲಕನೊಬ್ಬ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಭಿಕ್ಷಾಟನೆ ನಡೆಸುತ್ತಿದ್ದನ್ನು ಖಂಡಿಸಿ ಅಯ್ಯಪ್ಪ ಮಾಲೆ ಧರಿಸಿ ಭಿಕ್ಷಾಟನೆ ತಡೆಯುವಂತೆ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಗದಗ ಜಿಲ್ಲಾ ಘಟಕದಿಂದ ಎಸ್ಪಿ ಅವರಿಗೆ ಮನವಿ ನೀಡಲಾಯಿತು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಜಿಲ್ಲಾ ಸಾಸ್ ಈ ಬಾಲಕ ಇದಕ್ಕೂ ಮುಂಚೆ ಗದಗ ನಗರದಲ್ಲಿ ಭಿಕ್ಷಾಟನೆ ಮಾಡಿದ್ದನ್ನು ಇವನಿಗೆ ಬುದ್ಧಿ ಹೇಳಿದ್ದು ಅಲ್ಲದೆ ಇವನಿಗೆ ಮಾಲೆ ಹಾಕಿ ಭಿಕ್ಷಾಟನೆ ಮಾಡುವಂತೆ ಪ್ರೇರೆಪಿಸುವಂತ ಒಂದು ಗ್ಯಾಂಗ ಇದ್ದು ಇವರನ್ನು ಕಳೆದ ಬಾರಿ
ಪವಿತ್ರ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಭಿಕ್ಷಾಟನೆ ಮಾಡದಂತೆ ಗದಗ ಬಡಾವಣೆ ಪೋಲಿಸರ ಸಮ್ಮುಖದಲ್ಲಿ ತಾಕೀತು ಮಾಡಿರುತ್ತದೆ ಆದರೆ ಇವರು ಬಿಡದೆ ತಮ್ಮ ಹಳೇ ಚಾಳಿಯನ್ನೆ ಮುಂದುವರೆಸಿ ಈ ಬಾಲಕರೊಂದಿಗೊ ಪ್ರತಿ ವರ್ಷ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಭಿಕ್ಷಾಟನೆ ಮಾಡುತ್ತಿದ್ದು ಅಯ್ಯಪ್ಪ ಸ್ವಾಮಿ ಭಕ್ತರಿಗೆ ನೋವುಂಟು ಮಾಡಿ ಮಾಲೆ ಧರಿಸಿ ಭಿಕ್ಷಾಟನೆ ಮಾಡುತ್ತಿರುವುದು ಕಂಡು ಬಂದಿರುತ್ತದೆ.ಕೂಡಲೇ ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮತ್ತು ಭಿಕ್ಷಾಟನೆ ಮಾಡುತ್ತಿರುವ ಬಾಲಕರನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಸೇರಿಸಿಬೇಕು ಗ್ಯಾಂಗ ಲೀಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿದ್ದಾರೆ.
ಈ ಸಂಧರ್ಭದಲ್ಲಿ ಸಾಸ್ ನ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ನಾಗರಾಜ ಬಾಗಲಕೋಟ,ಜಿಲ್ಲಾ ಸಮಿತಿ ಸದಸ್ಯರಾದ ಮಂಜುನಾಥ ಹಳ್ಳೂರಮಠ,ಪ್ರಸಾದ ಕೋಡಿತ್ಕರ,ಗೋವಿಂದಪ್ಪ ಮೂಲಿಮನಿ,ಈರಣ್ಣ ಪೂಜಾರ,ಆನಂದ ಕಂಬಳಿ ಈರಣ್ಣ ಕಾತರಕಿ,ಗವಿಸಿದ್ದಯ್ಯ ಪತ್ರಿಮಠ, ಶ್ರೀರಾಮ ಸೇನಾ ರಾಜ್ಯ ವಕ್ತಾರ ರಾಜು ಕಾನಪ್ಪನವರ ಸೇರಿದಂತೆ ಅಯ್ಯಪ್ಪ ಭಕ್ತಾದಿಗಳು ಹಾಜರಿದ್ದರು.