ಮುಂಡರಗಿ : ರಾಜ್ಯ ಸರ್ಕಾರಿ ನೌಕರರ ತಾಲೂಕು ಶಾಖೆಯ ನಾಲ್ಕು ಕಾರ್ಯಕಾರಿಣಿ ಸಮಿತಿ ಸದಸ್ಯರ ಸ್ಥಾನಕ್ಕೆ ಸೋಮವಾರ ತುರುಸಿನ ಮತದಾನ ನಡೆಯಿತು ಕಳೆದ ವರ್ಷಕ್ಕಿಂತ ಈ ಬಾರಿ ಕುತೂಹಲ ಮೂಡಿಸಿದ ಮುಂಡರಗಿ ತಾಲೂಕು ನೌಕರರ ಸಂಘದ ಚುನಾವಣೆ ಫಲಿತಾಂಶ ಪ್ರಕಟ ಆಗುವ ಮೂಲಕ ತೆರೆ ಬಿದ್ದಿದೆ.
ಬೆಳಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಆರಂಭಗೊಂಡು ಸಂಜೆ ಮತದಾನದ ಎಣಿಕೆ ಕಾರ್ಯ ಪೂರ್ಣಗೊಂಡು ಹೆಚ್ಚು ಮತ ಪಡೆದು ಆಯ್ಕೆಯಾದ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ ಚುನಾವಣಾ ಅಧಿಕಾರಿಗಳಾಗಿ ವಿ ಎ ರೋಣದ ಕಾರ್ಯನಿರ್ವಹಿಸಿದ್ದಾರೆ ಒಟ್ಟು 31 ಸ್ಥಾನಗಳಿಗೆ ಚುನಾವಣೆ ನಡೆಸಬೇಕಾಗಿತ್ತು ಇದರಲ್ಲಿ 27 ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು ಹಾಗಾಗಿ ಇನ್ನುಳಿದ ನಾಲ್ಕು ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಸಲಾಯಿತು.
ಪಶುಪಾಲನ ಇಲಾಖೆಯಲ್ಲಿ ಶ್ರೀ ಎಂ ವಿ ಹಿರೇಗೌಡರ ಕಂದಾಯ ಇಲಾಖೆಯಲ್ಲಿ ಎಂ ಎಂ ವಿಭೂತಿ ಪ್ರೌಢ ಶಾಲಾ ಶಿಕ್ಷಣ ಇಲಾಖೆಯ ನಾಗರಾಜ್ ಹಳ್ಳಿಕೇರಿ ತಾಲೂಕು ಪಂಚಾಯತಿ ಇಲಾಖೆಯ ಮಹೇಶ್ ಅಲಿಪುರ್ ಜಯ ಸಾಧಿಸಿದ್ದಾರೆ.