ಗದಗ : ಗದಗ ಜಿಲ್ಲೆಯ ಭೂ ಮಾಪನ ಇಲಾಖೆಯಲ್ಲಿ ಲಂಚದ ಹಪಾ ಹಪಿ ದಿನದಿಂದ ದಿನಕ್ಕೆ ಜೋರಾಗಿ ನಡೆದಿದೆ ಭೂ ದಾಖಲೆ ಪಡೆಯಲು ಸರ್ಕಾರ ಆನ್ಲೈನ್ ಅರ್ಜಿ ಮೂಲಕ ಸರಳಿಕರಣ ಗೊಳಿಸಿದರು ಸಹಿತ ಅಧಿಕಾರಿಗಳಿಗೆ ಅಥವಾ ಮಧ್ಯವರ್ತಿಗಳಿಗೆ ಲಂಚ ಕೊಟ್ಟರೆ ಮಾತ್ರ ಎಲ್ಲ ಅರ್ಜಿ ಸರಳವಾಗಿ ಪಡೆಯಬಹುದಾಗಿದೆ ಎಂದು ಜಗತ್ತ ಜಾಹಿರಾಗಿದ್ದು ಒಂದೆಡೆಯಾಗಿ ಉಳಿದರೆ ಅದೇ ಸರ್ಕಾರದಿಂದ ಲೈಸೆನ್ಸ್ ಸರ್ವೆರ ನೇಮಕಗೊಳಿಸಿ ಲೈಸನ್ಸ್ ಪಡೆದುಕೊಂಡ ಸರ್ವೆರ್ ನ ನವೀಕರಣಕ್ಕೆ ಲಂಚ ಪಡೆಯುತ್ತಿದ್ದ ಭೂಪ ರೋಣ,ಗಜೇಂದ್ರಗಡ,ನರಗುಂದ ತಾಲೂಕಿನ ಗೀರಿಶ್ ಎಂಬ ಭೂ ಮಾಪಾನ ಅಧಿಕಾರಿ 25 ಸಾವಿರ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿರುವಘಟನೆ ಗದಗ ನಗರದ ಸಾಯಿ ಬಾಬಾ ಗುಡಿ ಹತ್ತಿರ ನಡೆದಿದೆ.
ಗದಗ ಜಿಲ್ಲೆಯ ರೋಣ ಭೂ ಮಾಪನಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ನಿರ್ದೇಶಕ ಆರ್ ವಿ ಗಿರೀಶ್ ಲೋಕಾ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ ಲೈಸೆನ್ಸ್ ಸರ್ವೆಯರ್ ಆರ್ ವಿ ಗಿರೀಶ್ ಅವರು, ಸರ್ವೆಯರ್ ಲೈಸನ್ಸ್ ನವೀಕರಣಕ್ಕೆ ಅರುಣ್ ಕುಮಾರ್ ಎನ್ನುವವರ ಬಳಿ 25 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಲೋಕಾಯುಕ್ತ ಅಧಿಕಾರಿಗಳಿಗೆ ಅರುಣ್ ಕುಮಾರ್ ದೂರು ನೀಡಿದ ದೂರಿನ ಹಿನ್ನೆಲೆ ಲೋಕಾ ಪೋಲಿಸರ ದಾಳಿ ನಡೆದಿದೆ.
ಗದಗ ನಗರದ ಸಾಯಿ ಬಾಬಾ ಗುಡಿ ಹತ್ತಿರ ಅಧಿಕಾರಿ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಬಲೆಗೆ ಬಿದ್ದಿದಾನೆ.
ಗದಗನ ಲೋಕಾಯುಕ್ತ ಡಿಎಸ್ಪಿ ವಿಜಯ್ ಬಿರಾದಾರ್ ,ಇನ್ಸಪೆಕ್ಟರ್ ಗಳಾದ ರವಿ ಪುರುಷೋತ್ತಮ್, ಎಸ್ ಎಸ್ ತೇಲಿ ಹಾಗೂ ಸಿಬ್ಬಂದಿಯ ನೇತೃತ್ವದಲ್ಲಿ ಈ ದಾಳಿ ನಡೆದಿದೆ.