ಗದಗ: ನಗರದ ಬೆಟಗೇರಿ ನರಸಾಪೂರ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿರೋ ಖಾಸಗಿ ಗೋಡೌನ್ ಮೇಲೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳ ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿಟ್ಟಿದ್ದ ಸುಮಾರು 52 ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ.
ಅನ್ನಭಾಗ್ಯದ ಅಕ್ಕಿ ಅಂತಾ ಗೊತ್ತಾಗದೆ ಇರುವುದಕ್ಕೆ ನಂದಿ ಬ್ರಾಂಡ್ ಹುರಿಕಡಲೆ ಅಂತಾ ಪ್ರಿಂಟ್ ಆಗಿರೋ ಚೀಲದಲ್ಲಿ ಅಕ್ಕಿಯನ್ನು ತುಂಬಿದ್ದರು ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದಾಳಿ ನಡೆದಿದೆ.