ಗದಗವಾಣಿ ಪ್ರಾದೇಶಿಕ ದಿನಪತ್ರಿಕೆಯಿಂದ ನೀಡಲಾಗುವ ಪ್ರತಿಷ್ಠಿತ “ಕರುನಾಡು ಕಾಯಕ ಸಮ್ಮಾನ್-೨೦೨೪” ರಾಜ್ಯ ಪ್ರಶಶ್ತಿಗೆ ಅರ್ಜಿ ಆಹ್ವಾನ

ಸಮಗ್ರ ಪ್ರಭ ಸುದ್ದಿ
2 Min Read

ಗದಗ: ಗದಗವಾಣಿ ಪ್ರಾದೇಶಿಕ ದಿನಪತ್ರಿಕೆ ಹಾಗೂ ಟಿವಿಚಾನಲ್ ನ ಮೂರನೇ ವರ್ಷದ ಅದ್ದೂರಿ ವಾರ್ಷಿಕೋತ್ಸವದ ಪ್ರಯುಕ್ತ ಪ್ರತಿಷ್ಠಿತ “ಕರುನಾಡು ಕಾಯಕ ಸಮ್ಮಾನ-೨೦೨೪” ರಾಜ್ಯ ಪ್ರಶಸ್ತಿ ಗೆ ಅರ್ಜಿ ಆಹ್ವಾನಿಸಲಾಗಿದೆ.

ಸಮಾಜ ಸೇವೆ. ಕೃಷಿ, ರಾಜಕೀಯ, ವೈದ್ಯಕೀಯ, ಕಲೆ, ಕನ್ನಡಪರ ಹೋರಾಟ, ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಗೀತ, ನೃತ್ಯ, ಜಾನಪದ, ಯಕ್ಷಗಾನ, ಉದ್ಯಮ, ಶಿಲ್ಪಕಲೆ, ಚಿತ್ರಕಲೆ, ಸಂಕೀರ್ಣ, ಬಯಲಾಟ, ಪತ್ರಿಕೋದ್ಯಮ|ಮಾದ್ಯಮ, ಕ್ರೀಡೆ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿಯನ್ನು ರಾಜ್ಯಮಟ್ಟದಲ್ಲಿ ನೀಡಲಾಗುತ್ತದೆ.

ಪ್ರಶಸ್ತಿ ಆಯ್ಕೆ ಅತ್ಯಂತ ಪಾರದರ್ಶಕವಾಗಿ ನಡೆಯಲಿದ್ದು, ವ್ಯಕ್ತಿಗಳ ಆಯ್ಕೆಗಾಗಿ ಸಮಾಜ ಸೇವಕ ರಾಜು ಸೂರ್ಯವಂಶಿ ಹಾಗೂ ಉಪನ್ಯಾಸಕರಾದ ಮಹದೇವಪ್ಪ ಆಡೂರ, ರವಿಕುಮಾರ ತಳಗೇರಿ, ಸಂಗಪ್ಪ ಮಡಿವಾಳರ, ವಿರೇಶ ಪಾಟೀಲ, ಮಂಜುನಾಥ ಕುದರಿಕೋಟಿ, ಮುತ್ತಣ್ಣ ಭರಡಿ, ಅಲ್ಲಾಭಕ್ಷಿ ನಧಾಫ್ ಅವರ ನೇತೃತ್ವದಲ್ಲಿ ಒಂಬತ್ತು ಜನರ ಸಮಿತಿ ರಚಿಸಲಾಗಿದೆ.

ಆಯ್ಕೆಗೊಂಡ ಸಾಧಕರ ಸಾಧನೆಯ ಹಾದಿಯ ಕುರಿತು ಗದಗವಾಣಿ ಪ್ರಾದೇಶಿಕ ದಿನಪತ್ರಿಕೆಯಲ್ಲಿ “ಕಾಯಕ ಸಮ್ಮಾನ” ಹೆಸರಿನಲ್ಲಿ ಒಂದು ಪುಟದಷ್ಟು ಸಮಗ್ರ ಮಾಹಿತಿ ಒಳಗೊಂಡ ವಿಶೇಷ ಲೇಖನ ಹಾಗೂ ಟಿವಿಚಾನಲ್ ನಲ್ಲಿ ವ್ಯಕ್ತಿತ್ವ ಅನಾವರಣ ಕಿರು ಚಿತ್ರ ಬಿತ್ತರಿಸಲಾಗುತ್ತದೆ. ಪ್ರಶಸ್ತಿಯನ್ನು ಓದುಗ ದೊರೆಗಳ ಸಮಾವೇಶ, ಗದಗವಾಣಿ ಮೂರನೇಯ ವಾರ್ಷಿಕೋತ್ಸವ ಹಾಗೂ “ಗದಗವಾಣಿ ಗಾನಕೋಗಿಲೆ ಸೀಸನ್-೪” ರ ಕಾರ್ಯಕ್ರಮದ ಬೃಹತ್ ವೇದಿಕೆಯಲ್ಲಿ ನೀಡಿ ಗೌರವಿಸಲಾಗುತ್ತದೆ.

ತಮ್ಮ ಸ್ವ-ವಿವರ ಮಾಹಿತಿ, ಭಾವಚಿತ್ರ, ಅವಶ್ಯಕ ದಾಖಲೆ, ಸೂಕ್ತ ವಿಳಾಸ ಮತ್ತು ಸರಿಯಾದ ಸಂಪರ್ಕ ಸಂಖ್ಯೆಯೊಂದಿಗೆ ಅರ್ಜಿ ಸಲ್ಲಿಸಬಹುದು.

೨೦೨೪ರ ಅಕ್ಟೋಬರ್ ೨೭ ರ ಸಾಯಂಕಾಲ ೫ ಗಂಟೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಅರ್ಜಿ ಸಲ್ಲಿಸುವವರು- ಮಂಜುನಾಥ ಎಸ್. ರಾಠೋಡ, ಪ್ರಧಾನ ಸಂಪಾದಕರು ಗದಗವಾಣಿ ಪ್ರಾದೇಶಿಕ ದಿನಪತ್ರಿಕೆ ಸಾ. ಕಾಲಕಾಲೇಶ್ವರ ತಾ|| ಗಜೇಂದ್ರಗಡ ಜಿ|| ಗದಗ ಪಿನ್- ೫೮೨೧೧೪

ಹೆಚ್ಚಿನ ಮಾಹಿತಿಗಾಗಿ: ವೀರಣ್ಣ ಸಂಗಳದ(ರೋಣ)-೯೯೮೦೪೯೮೫೫೩, ಮಹಾದೇವ ಆಡೂರ(ಹನಮಸಾಗರ)-೯೯೪೫೭೨೭೮೨೭, ಮುರ್ತುಜಾ ಬದಾಮಿ(ಇಲಕಲ್)- ೮೦೭೩೩೭೭೮೫೬, ಶರಣಯ್ಯಸ್ವಾಮಿ ಹಿರೇಮಠ(ಗಂಗಾವತಿ)-೯೭೪೧೯ ೯೯೧೪೭, ಅಲ್ಲಾಭಕ್ಷಿ ನಧಾಪ(ಗಜೇಂದ್ರಗಡ)- ೮೨೯೬೮೧೩೦೫೯, ಮಂಜುನಾಥ ಕುದರಿಕೋಟಿ- ೯೫೯೦೨೧೦೮೧೦, ಅನೀಲ ಕರ್ಣೇ – 99008 95896, ಮುತ್ತಣ್ಣ ಭರಡಿ- 9945187154 ಸಂಪರ್ಕಿಸಬಹುದು.

Share this Article