ಮುಂಡರಗಿ: ಸಮಗ್ರ ಮಾನವತವಾದದ ತಳಹದಿಯ ಮೇಲೆ ರಚಿತವಾಗಿದ್ದ ದೀನದಯಾಳ್ ಉಪಾಧ್ಯಾಯರ ತತ್ವ ಸಿದ್ಧಾಂತಗಳು ಪೂರಕವಾಗಿದ್ದವು ಭಾರತದ ಏಕೆತೆ ಕುರಿತಂತೆ ಅವರ ವಿಚಾರಧಾರೆಗಳು ಸದಾ ಸ್ಮರಣೀಯ ಎಂದು ಬಿಜೆಪಿ ಮಂಡಲದ ಅಧ್ಯಕ್ಷ ಹೇಮಗಿರಿಶ ಹಾವಿನಾಳ ತಿಳಿಸಿದರು.
ಪಟ್ಟಣದ ಬಿಜೆಪಿ ಕಾರ್ಯಕರ್ತರು ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜಯಂತಿಯಲ್ಲಿ ಅವರು ಮಾತನಾಡಿದರು ಹಿಂದುತ್ವದ ಪ್ರತಿಪಾದಕರಾದ ದೀನದಯಾಳ ಅವರು ಒಬ್ಬ ಶ್ರೇಷ್ಠ ರಾಜಕಾರಣಿಯಾಗಿದ್ದರು ಅವರ ಸಿದ್ಧಾಂತಕ್ಕೆ ಯಾವುದೇ ರಾಜಕೀಯ ಅಡೆತಡೆಗಳು ಇರಲಿಲ್ಲ ಅವರ ಸಿದ್ಧಾಂತಗಳು ಸಮಗ್ರ ಮಾನವತವಾದವನ್ನು ಪ್ರತಿನಿಧಿಸುತ್ತಿದ್ದವು ನಾವೆಲ್ಲ ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ್ ಬಿಳಿ ಮಗ್ಗದ್, ಪ್ರಶಾಂತ್ ಗುಡ್ದಪ್ನವರ್, ರವಿ ಲಮಾಣಿ,ಪುರಸಭೆ ಸದಸ್ಯ ಜ್ಯೋತಿ ಹಾನಗಲ್, ಶಿವನಗೌಡ ಗೌಡ್ರು,ಮೈಲಾರಪ್ಪ ಕಲಿಕೇರಿ, ಬಸವರಾಜ್ ಚಿಕ್ಕಣ್ಣವರ್,ಮಂಜುನಾಥ್ ಮುಧೋಳ,ದೇವ ಹಡಪದ,ಶಿವಕುಮಾರ್ ಕುರಿ ಅಶೋಕ್ ಚೂರಿ,ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು