ಮುಂಡರಗಿ: ಆಸ್ತಿಗಾಗಿ ತಕರಾರು ತೆಗೆದ ಕಾರಣಕ್ಕಾಗಿ ತನ್ನ ಸ್ವಂತ ತಂಗಿಯನ್ನೇ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಪೋಲಿಸ ಠಾಣೆಗೆ ಬಂದು ಶರಣಾದ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.
ಮುಂಡರಗಿ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ನಗರದಲ್ಲಿ ವಾಸವಿದ್ದ ಕಾಳಮ್ಮ ಕ್ಯಾದಿಗೆಹಳ್ಳಿ (35) ಅಲಿಯಾಸ್ ಖುರ್ಷಿದಾ ಹತ್ಯೆಯಾದ ಮಹಿಳೆ ಹಾಗೂ ಅವಳ ಸ್ವಂತ ಅಣ್ಣನಾದ ಈಶ್ವರಪ್ಪ ಕ್ಯಾದಿಗೇಹಳ್ಳಿ ಇವರಿಬ್ಬರ ನಡುವೆ ಮುಂಡರಗಿ ತಾಲೂಕಿನ ಬೆಣ್ಣಿಹಳ್ಳಿಯಲ್ಲಿ ಪಿತ್ರಾರ್ಜಿತ ಆಸ್ತಿಯಾದ 15 ಎಕರೆ ಜಮೀನಿನ ವಿಚಾರವಾಗಿ ವ್ಯಾಜ್ಯವಾಗಿ ಇಂದು ಆಸ್ತಿ ವ್ಯಾಜ್ಯ ವಾಪಾಸ್ ಪಡೆಯುವಂತೆ ಕೇಳಲು ಮನೆಗೆ ಹೋಗಿದ್ದ ಅಣ್ಣ ಈಶ್ವರಪ್ಪ ಅಣ್ಣನ ಮಾತು ಕೇಳದೆ ಇದ್ದಿದಕ್ಕೆ ಈಶ್ವರಪ್ಪ ಸ್ವಂತ ತಂಗಿ ಅನ್ನುವುದನ್ನು ಮರೆತು ಚಾಕುವಿನಿಂದ 6 ಬಾರಿ ಇರಿದು ಬಳಿಕ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ನಂತರ ಕೊಲೆ ಮಾಡಿದ ಆರೋಪಿ ಮುಂಡರಗಿ ಪೋಲಿಸ ಠಾಣೆಗೆ ಶರಣಾಗಿದ್ದಾನೆ ಈ ಕುರಿತು ಮುಂಡರಗಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
