ಮುಂಡರಗಿಯಲ್ಲಿ ಸರ್ ಸಿದ್ದಪ್ಪ ಕಂಬಳಿ ಕಂಚಿನ ಪುತ್ತಳಿ ಅನಾವರಣ

graochandan1@gmail.com
1 Min Read

ಮುಂಡರಗಿ : ಯಾವುದೇ ವ್ಯಕ್ತಿಯ ಪುತ್ಥಳಿ ನಿರ್ಮಾಣವಾಗಬೇಕಾದರೆ ಅವರಲ್ಲಿರುವ ವ್ಯಕ್ತಿತ್ವ ಉದಾತ ವಿಚಾರಗಳು ಅಡಗಿರುತ್ತವೆ ಅಂತಹ ವಿಚಾರಧಾರೆಗಳನ್ನು ಹೊಂದಿದ ಸರ್ ಸಿದ್ದಪ್ಪ ಕಂಬಳಿ ಪುತ್ತಳಿ ಸ್ಥಾಪನೆ ಇಂದಿನ ಯುವಕರಿಗೆ ಒಳ್ಳೆ ಮಾರ್ಗದಲ್ಲಿ ನಡಿಯುವಂತಾಗಲು ಪ್ರೇರಣೆಯಾಗಬೇಕು ಎಂದು ರೋಣ ಶಾಸಕ ಜಿ ಎಸ್ ಪಾಟೀಲ್ ತಿಳಿಸಿದರು.

ಪಟ್ಟಣದ ಕೋಟೆಯ ಭಾಗದಲ್ಲಿ ಸರ್ ಸಿದ್ದಪ್ಪ ಕಂಬಳಿ ಕಂಚಿನ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿ ನಂತರ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳು ಸಾಮಾಜಿಕ ಕೆಲಸಗಳನ್ನು ನಿಸ್ವಾರ್ಥದಿಂದ ಮಾಡಿದ ಸಿದ್ದಪ್ಪ ಕಂಬಳಿ ಅವರ ವಿಚಾರಗಳನ್ನು ಅರಿತುಕೊಂಡು ಅವರಿಗೆ ಗೌರವ ಕೊಡುವುದರಿಂದ ಸಮಾಜದಲ್ಲಿ ನಮ್ಮನ್ನು ನಾವು ಗೌರವಿಸಿಕೊಂಡಂತಾಗುತ್ತದೆ ದಿಟ್ಟತನದಿಂದ ಗುರುತಿಸಿಕೊಂಡಿದ್ದ ಕಂಬಳಿ ಅವರ ವಿಚಾರಗಳು ಎಲ್ಲ ಕಡೆಗೆ ಹರಡುವಂತಾಗಲಿ ಎಂದರು.

ಸಾನಿಧ್ಯ ವಹಿಸಿದ ಜ. ಡಾ. ಅನ್ನದಾನೇಶ್ವರ ಸ್ವಾಮೀಜಿ ಮಾತನಾಡಿ ಸರ್ ಸಿದ್ದಪ್ಪ ಕಂಬಳಿ ದೇಶದ ಮಹಾನ್ ನಾಯಕರು ಒಮ್ಮೆಲೇ 7 ಕಾತೆಗಳನ್ನು ಹೊಂದಿ ಮಂತ್ರಿಗಳಾಗಿ ಜನ ಸೇವೆ ಸಲ್ಲಿಸಿದ್ದಾರೆ ಈ ಹಿಂದೆ ಕೋಟೆ ಭಾಗದಲ್ಲಿ ಮೂರ್ತಿ ಸ್ಥಾಪನೆಗೊಂಡಾಗ ಪುರಸಭೆ ಅಧ್ಯಕ್ಷರಾಗಿದ್ದ ವೈ ಎನ್ ಗೌಡರ್ ಮೂರ್ತಿ ಸ್ಥಾಪನೆಗೆ ಅನುಕೂಲ ಮಾಡಿ ಕೊಡುವುದರ ಜೊತೆಗೆ ಶ್ರೀ ಮಠವು ಆರ್ಥಿಕ ನೆರವು ನೀಡಿತ್ತು ಎಂದರು.

ಧಾರವಾಡ ಕಸಾಪ ಪ್ರೊ. ಕೆ ಎಸ್ ಕೌಜಲಗಿ ಸರ್ ಸಿದ್ದಪ್ಪ ಕಂಬಳಿ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು ಕಂಚಿನ ಮೂರ್ತಿ ಸ್ಥಾಪನೆಗೆ ಆರ್ಥಿಕ ನೆರವು ನೀಡಿದ ಮಾಜಿ ಸಚಿವ ಕಳಕಪ್ಪ ಬಂಡಿ ಅವರ ಸೇವೆ ಸ್ಮರಣೆಯಾಗಿದೆ ಎಂದರು ಈ ಸಂದರ್ಭದಲ್ಲಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ರಾಮಕೃಷ್ಣ ದೊಡ್ಡಮನಿ ವೈ ಎನ್ ಗೌಡರ್ ಪುರಸಭೆ ಅಧ್ಯಕ್ಷ ನಿರ್ಮಲ ಕೋರ್ಲಹಳ್ಳಿ ಪುರಸಭೆ ಉಪಾಧ್ಯಕ್ಷ ನಾಗೇಶ್ ಹುಬ್ಬಳ್ಳಿ ಕೆ ವಿ ಹಂಚಿನಾಳ ಸರ್ ಸಿದ್ದಪ್ಪ ಕಂಬಳಿ ಮೂರ್ತಿ ನಿರ್ಮಾಣ ಸಮಿತಿ ಅಧ್ಯಕ್ಷ ಮಂಜುನಾಥ್ ಇಟಗಿ ಪ್ರತಿಷ್ಠಾನ ಅಧ್ಯಕ್ಷ ಶಂಕರ್ ಕುಂಬಿ ಮಂಜುನಾಥ್ ಮುಧೋಳ್ ಉಪಸ್ಥಿತರಿದ್ದರು.

- Advertisement -
Ad image

Share this Article