ಹಳ್ಳಿಗುಡಿ ಗ್ರಾಮದಲ್ಲಿ ಹಾನಗಲ್ಲ ಕುಮಾರಸ್ವಾಮಿಗಳ ಜಯಂತೋತ್ಸವ ನಿಮಿತ್ಯ ಸದ್ಭಾವನ ಪಾದಯಾತ್ರೆ

ಸಮಗ್ರ ಪ್ರಭ ಸುದ್ದಿ
1 Min Read

ಮುಂಡರಗಿ- ಅಖಿಲ ಭಾರತ ವೀರಶೈವ ಮಹಾಸಭ ಸಂಸ್ಥಾಪಕ ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳ 157ನೇ ಜಯಂತೋತ್ಸವ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿತು.

ಆರನೇ ದಿನವಾದ ಇಂದು ಹಳ್ಳಿಗುಡಿ ಗ್ರಾಮದಲ್ಲಿ ಕುಮಾರೇಶ್ವರ ಜ್ಯೋತಿ ರಥಯಾತ್ರೆ ಒಳಗೊಂಡ ಸದ್ಭಾವನಾ ಪಾದಯಾತ್ರೆಯು ಜರುಗಿತು ಸದ್ಭಕ್ತರು ಅತ್ಯಂತ ಭಕ್ತಿ ಭಾವದಿಂದ ಸಕಲ ವಾದ್ಯಗಳೊಂದಿಗೆ ಮತ್ತು ಕಳಶ ಕನ್ನಡಿಯೊಂದಿಗೆ ವೈಭವಪೂರಿತವಾಗಿ ಬರಮಾಡಿಕೊಂಡರು.

ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸದ್ಗುಣಗಳ ದೀಕ್ಷೆ ದುಶ್ಚಟಗಳ ಭಿಕ್ಷೆ ಅನ್ನೋ ಸಂದೇಶ ಸಾರುವ ಮೂಲಕ ಗ್ರಾಮಸ್ಥರಲ್ಲಿ ಮಠಾಧೀಶರು ಅರಿವು ಮೂಡಿಸುವ ಕಾರ್ಯಕ್ರಮ ನೆರವೇರಿಸಿದರು ಈ ವೇಳೆ ಮುಂಡರಗಿ ಶ್ರೀ ಮಠದ ಉತ್ತರಾಧಿಕಾರಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಕುಮಾರೇಶ್ವರ ಜಯಂತೋತ್ಸವ ಸಮಿತಿಯ ಸರ್ವ ಮಠಾಧೀಶರು ಊರಿನ ಮುಖಂಡರು ಉಪಸ್ಥಿತರಿದ್ದರು.

Share this Article