ಹಾನಗಲ್ಲ ಗುರುಕುಮಾರೇಶ್ವರ 157 ನೇ ಜಯಂತಿ ಅಂಗವಾಗಿ ಪಟ್ಟಣಕ್ಕೆ ಆಗಮಿಸಿದ ಜ್ಯೋತಿಯನ್ನು ಅದ್ಧೂರಿಯಾಗಿ ಸ್ವಾಗತಿಸಿದ ಭಕ್ತರು

graochandan1@gmail.com
1 Min Read

ಮುಂಡರಗಿ: ಕಾರಣಿಕ ಯುಗಪುರುಷ ಹಾನಗಲ್ಲ ಗುರುಕುಮಾರ ಮಹಸ್ವಾಮಿಗಳ 157 ನೇ ಜಯಂತಿ ಹಿನ್ನೆಲೆ, ಗದಗ ಜಿಲ್ಲೆ ಮುಂಡರಗಿ ಪಟ್ಟಣಕ್ಕೆ ಆಗಮಿಸಿದ, ಗುರುಕುಮಾರೇಶ್ವರ ಜ್ಯೋತಿಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಅಣ್ಣಿಗೇರಿಯ ಶ್ರೀಗುರು ಯಳಂದೂರ ಬಸವಲಿಂಗ ಶಿವಯೋಗಿಗಳ ಗದ್ದುಗೆಯಿಂದ ಆಗಮಿಸಿದ ಕುಮಾರೇಶ್ವರ ಜ್ಯೋತಿಗೆ, ಮುಂಡರಗಿ ನಾಡಿನ ಸಮಸ್ತ ಜನತೆ ಅಪಾರ ಭಕ್ತಿ, ಭಾವದಿಂದ ಸ್ವಾಗತಿಸಿಕೊಂಡಿತು. ಅಲ್ಲದೇ ಯುವಸಮೂಹ ಬೈಕ್ ರ‌್ಯಾಲಿ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕುಮಾರೇಶ್ವರ ಜ್ಯೋತಿಯನ್ನ ಬರಮಾಡಿಕೊಂಡಿತು.‌‌

ಈ ವೇಳೆ, ಶ್ರೀ ಮನಿಪ್ರ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಾನಿಧ್ಯದಲ್ಲಿ ಹಾಗೂ ಜಯಂತಿ ಮಹೋತ್ಸವದ ಸರ್ವ ನೇತೃತ್ವ ವಹಿಸಿಕೊಂಡಿರುವ ಶ್ರೀ ಮಠದ ಉತ್ತರಾಧಿಕಾರಿಗಳಾದ, ಮಲ್ಲಿಕಾರ್ಜುನ ಮಹಸ್ವಾಮಿಗಳು ಸೇರಿದಂತೆ, ಹಾವೇರಿಯ ಸದಾಶಿವ ಸ್ವಾಮಿಜಿ, ನಾಗನೂರಿನ ಅಲ್ಲಮ ಪ್ರಭುಸ್ವಾಮಿಜಿ, ಲಿಂಗನಾಯಕನಹಳ್ಳಿಯ ಚೆನ್ನವೀರಸ್ವಾಮಿಜಿ, ತುಪ್ಪದ ಕುರಹಟ್ಟಿಯ ವಾಗೀಶ ಪಂಡಿತಾರಾಧ್ಯ ಸ್ವಾಮಿಜಿ,‌ ಬಳೊಟಗಿಯ ಶಿವಕುಮಾರ ಸ್ವಾಮಿಜಿ, ನೀಲಗುಂದದ ಚೆನ್ನಬಸವ ಸ್ವಾಮಿಜಿ, ಹುಕ್ಕೇರಿಯ ಶಿವಬಸವ ಸ್ವಾಮಿಜಿ, ಅಂಕಲಗಿಯ ಅಮರಸಿದ್ದೇಶ್ವರ ಸ್ವಾಮಿಜಿ, ನರಗುಂದದ ಶಿವಕುಮಾರ ಸ್ವಾಮಿಜಿ, ಶಿವಪುರದ ಶಿವಲಿಂಗೇಶ್ವರ ಸ್ವಾಮಿಜಿ, ಮೂಲೆಗದ್ದೆಯ ಶ್ರೀ ಚೆನ್ನಬಸವ ಸ್ವಾಮಿಗಳು, ನರಗುಂದದ ಪಂಚಗೃಹ ಹಿರೇಮಠ ಸ್ವಾಮಿಜಿ, ಹಿರೇಮಲ್ಲನಕೇರಿ ಚೆನ್ನಬಸವ ಸ್ವಾಮಿಜಿ, ನಿರಂಜನ ದೇವರು, ಕಮತಾನಹಟ್ಟಿ ಗುರುದೇವ ದೇವರು, ಚೆನ್ನಬಸವ ದೇವರು, ಗದಿಗೆಯ್ಯ ದೇವರು, ಗೋಡಗೇರಿ‌ ಶಿವಾನಂದ ದೇವರು,ಅರ್ಜುನಗಿರಿ ಗುರುದೇವ ದೇವರು,
ಷಡಕ್ಷರಿ ದೇವರು, ನರಸಾಪುರದ ವಿರೇಶ್ವರ ದೇವರು, ಸೇರಿದಂತೆ ಸ್ಥಳಿಯ ಪುರಸಭೆ ನಾಯಕರು ಹಾಗೂ ಪಟ್ಟಣದ ಮುಖಂಡರು ಜ್ಯೋತಿಯನ್ನ ಬರಮಾಡಿಕೊಳ್ಳುವ ಮೂಲಕ, ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇನ್ನು ಕುಮಾರೇಶ್ವರ ಜ್ಯೋತಿ ಶ್ರೀಮಠಕ್ಕೆ ಆಗಮಿಸುತ್ತಿದ್ದಂತೆ, ಅಕ್ಕನ ಬಳಗದ ತಾಯಂದಿರು ಹಾಗೂ ಎನ್ ಸಿಸಿ ವಿದ್ಯಾರ್ಥಿಗಳು ಪುಷ್ಪ ವೃಷ್ಟಿಯ ಮೂಲಕ ಜಯಘೋಷದೊಂದಿಗೆ ಕುಮಾರೇಶ್ವರ ಜ್ಯೋತಿಯನ್ನ ಬರಮಾಡಿಕೊಂಡರು.

- Advertisement -
Ad image

Share this Article