ನರೇಗಲ್ಲ: ಅಪರಿಚಿತ ವಾಹನ ಹರಿದು ಬೆಳ್ಳಂ ಬೆಳಿಗ್ಗೆ ಚಹಾ ಕುಡಿಯಲು ಹೋಗಿದ್ದ ವೃಧ್ಧ ಸಾವನಪ್ಪಿದ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಬೆಳಗಿನ ಜಾವ 5.30 ರ ಸುಮಾರಿಗೆ ಮನೆಯಿಂದ ಚಹಾ ಕುಡಿಯಲೆಂದು ಹೊರಗೆ ಹೋಗಿದ್ದ ವೃಧ್ಧ ಪಟ್ಟಣ ಪಂಚಾಯತಿ ಬಳಿ ರಸ್ತೆಯಲ್ಲಿ ತೆರಳುವಾಗ ಅಪರಿಚಿತ ವಾಹನ ಒಂದು ವೇಗವಾಗಿ ಬಂದು ವೃಧ್ಧನ ಮೇಲೆ ಏಕಾಏಕಿ ಹರಿದ ವೃಧ್ಧನ ದೇಹ ಛಿದ್ರ ಛಿದ್ರವಾಗಿ ಸ್ಥಳದಲ್ಲೇ ಸಾವನಪ್ಪಿದ್ದಾನೆ.
ನರೇಗಲ್ ಪಟ್ಟಣದ ಮಲ್ಲಯ್ಯ ಬಕ್ಕಯ್ಯನಮಠ (65) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ನರೇಗಲ್ ಪೊಲೀಸರ ಭೇಟಿ ಪರಿಶೀಲನೆ ನಡೆಸಿ ವಾಹನ ಪತ್ತೆಗೆ ಮುಂದಾಗಿರೋ ಪೊಲೀಸರು ಈ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.