ಸೆ.1 ರಿಂದ 7 ರ ವರೆಗೆ ಒಂದೇ ಸೂರಿನಡಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಮಾರಾಟ

ಸಮಗ್ರ ಪ್ರಭ ಸುದ್ದಿ
1 Min Read
ಗದಗ: ಗದಗ ಜಿಲ್ಲಾ ಗಣೇಶ ಮೂರ್ತಿ ತಯಾರಕರ ಸಂಘದ ವತಿಯಿಂದ ಈ ಬಾರಿಯೂ ನಗರದ ಎಂ.ಪಿ.ಎಮ್.ಸಿ ಮಾರುಕಟ್ಟೆಯ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಸುಮಾರು 16  ಗಣೇಶ ಮೂರ್ತಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಎ.ಪಿ.ಎಂ.ಸಿ. ಆವರಣದಲ್ಲಿ ಸುಂದರ, ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಇರಲಿವೆ.
ಸೆ. 1 ರಿಂದ 7 ರ ಮುಂಜಾನೆ 9 ರಿಂದ ರಾತ್ರಿ 9 ಗಂಟೆವರೆಗೆ ಮಳಿಗೆಗಳಲ್ಲಿ ಗಣೇಶ ಮೂರ್ತಿಗಳು ಲಭ್ಯ ಇರಲಿವೆ. ಸ್ಥಳೀಯ ಹಾಗೂ ನೆರೆಯ ಜಿಲ್ಲೆಗಳಿಂದ ಕಲಾವಿದರು ತಯಾರಿಸಿರುವ ಶುದ್ಧ ಪರಿಸರ ಸ್ನೇಹಿ ಮಣ್ಣಿನ ಗಣೇಶ ವಿಗ್ರಹಗಳ ಮಾರಾಟ ನಡೆಯಲಿದೆ.
ವಿವಿಧ ಶೈಲಿಯ ಮಣ್ಣಿನ ಸುಂದರ ಗಣೇಶ ಮೂರ್ತಿಗಳು  ಇಲ್ಲಿ ದೊರೆಯುತ್ತವೆ. ಒಂದೇ ಸೂರಿನಡಿ ವಿವಿಧ ಕಲಾವಿದರು ತಯಾರಿಸಿದ ಗಣೇಶಮೂರ್ತಿಗಳು ಮಾರಾಟಕ್ಕೆ ಲಭ್ಯ ಇರಲಿವೆ.
ಪ್ರತಿ ವರ್ಷದಂತೆ ಈ ಬಾರಿಯೂ ಗದಗ ಜಿಲ್ಲೆಯ ಜನರು ಸಹಕರಿಸಿ, ಪರಿಸರ ಸ್ನೇಹಿ ಗಣೇಶ ವಿಗ್ರಹ ಗಳನ್ನು ಖರೀದಿಸಿ  ಕಲಾವಿದರನ್ನು ಪ್ರೋತ್ಸಾಹಿಸಲು ಗಣೇಶ ಮೂರ್ತಿ ತಯಾರಕರ ಸಂಘದ ಪ್ರಧಾನ ಕಾರ್ಯದರ್ಶಿ ಮುತ್ತಣ್ಣ ಭರಡಿ ಮನವಿ ಮಾಡಿದ್ದಾರೆ.
Share this Article