ಮುಂಡರಗಿ- ಇತ್ತೀಚಿಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ರಂಗನಪಲ್ಕೆಯಲ್ಲಿ ದಲಿತ ಸಮುದಾಯದ ಯುವತಿಯ ಮೇಲೆ ಅತ್ಯಾಚಾರ ಎಸಿಗಿದ್ದು ಅಂತವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಕರ್ನಾಟಕ ರಾಜ್ಯ ಬೋವಿ ಮಹಾಸಭಾ ಮತ್ತು ಸಮಗ್ರ ಮಾನವ ಹಕ್ಕುಗಳ ಸಂರಕ್ಷಣಾ ಸಂಘದಿಂದ ತಹಸಿಲ್ದಾರ್ ಮೂಲಕ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು ರಾಜ್ಯದಲ್ಲಿ ಒಂದೇ ವರ್ಷದ ಅವಧಿಯಲ್ಲಿ ಎರಡು ಯುವತಿಯರ ಕೊಲೆಯಾಗಿದ್ದು ನೆನಪು ಮಾಸುವ ಮುನ್ನವೇ ಇಂತಹ ಮತ್ತೊಂದು ಹೀನ ಕೃತ್ಯ ನಡೆದಿದೆ ಇಲ್ಲಿ ಮಹಿಳೆಯರನ್ನು ಅತ್ಯಾಚಾರ ಕೊಲೆ ಮಾಡುವುದು ಸುಲಭವಾಗಿದೆ ಗೃಹ ಸಚಿವರು ಕೂಡಲೇ ಯುವತಿ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಅವರನ್ನು ಗಲ್ಲಿಗೇರಿಸಬೇಕು ಮತ್ತು ಯುವತಿಯ ಕುಟುಂಬಕ್ಕೆ ಬದ್ರತೆ ನೀಡಿ ಪರಿಹಾರ ನೀಡಬೇಕು ಪ್ರತಿಸಲ ಮಹಿಳೆಯರು ಮೇಲೆ ಅತ್ಯಾಚಾರ ಕೊಲೆ ನಡೆದಾಗ ಕೇವಲ ಪ್ರತಿಭಟನೆ ಮಾಡಿ ಮೇಣದ ಬತ್ತಿಯನ್ನು ಹತ್ತುವುದನ್ನು ಬಿಟ್ಟು ಅತ್ಯಾಚಾರಿಗಳನ್ನು ಸುಡಬೇಕು ಎಂದು ಆಕಾಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬೋವಿ ಮಹಾಸವಾದ ಯುವ ಘಟಕದ ಅಧ್ಯಕ್ಷ ಮಂಜುನಾಥ್ ಕಟ್ಟಿಮನಿ, ತಾಲೂಕು ಅಧ್ಯಕ್ಷರಾದ ಹನುಮಪ್ಪ ವಡ್ಡರ್, ಮಂಜುನಾಥ್ ಗುಗ್ರಿ,ವೆಂಕಟೇಶ್ ಸಿಂದೋಗಿ, ಕನಕರಾಯ ಕಟ್ಟಿಮನಿ,ಸಮಗ್ರ ಮಾನವ ಹಕ್ಕುಗಳ ಸಂರಕ್ಷಣಾ ಸಂಘದ ತಾಲೂಕ ಅಧ್ಯಕ್ಷರಾದ ಮಾರುತಿ ಬಂಡಿವಡ್ಡರ್,ಕನಕರಾಯ ಬಂಡಿವಡ್ಡರ್ ಭೈರಪ್ಪ ಕಾತರಕಿ,ಶಿವು ಗೊಂಡಬಾಳ,ವಾಸು ಬದಾಮಿ ಮಂಜುನಾಥ್ ಗುಗ್ರಿ ವೆಂಕಟೇಶ್ ಸಿಂದಗಿ,ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು